ಬುಧವಾರ, ಆಗಸ್ಟ್ 17, 2022
26 °C

ಮಹಾರಾಷ್ಟ್ರ: ಎರಡು ಪದವೀಧರ ಕ್ಷೇತ್ರಗಳಲ್ಲಿ ಎನ್‌ಸಿಪಿ ಅಭ್ಯರ್ಥಿಗಳಿಗೆ ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರ ವಿಕಾಸ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಇಬ್ಬರು ಅಭ್ಯರ್ಥಿಗಳು ಔರಂಗಬಾದ್‌ ಮತ್ತು ಪುಣೆ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ.

ಔರಂಗಬಾದ್‌ ಪದವೀಧರ ಕ್ಷೇತ್ರದಲ್ಲಿ ಎನ್‌ಸಿಪಿ ಅಭ್ಯರ್ಥಿ ಸತೀಶ್ ಚವನ್‌ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಶಿರೀಶ್‌ ಬೋರಾಲ್ಕರ್‌ ಅವರ ವಿರುದ್ಧ ಜಯಗಳಿಸಿದ್ದಾರೆ.  ಪುಣೆ ವಲಯದ ಪದವೀಧರ ಕ್ಷೇತ್ರದಿಂದ ಎನ್‌ಸಿಪಿ ಅಭ್ಯರ್ಥಿ ಅರುಣ್‌ ಲಾಡ್ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸಂಗ್ರಾಮ್ ದೇಶ್‌ ಮುಖ್ ಅವರನ್ನು 48824 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ಪುಣೆ ವಲಯದ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು.

ಚಂದ್ರಕಾಂತ್ ಪಾಟೀಲ್, 2019ರಲ್ಲಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುವ ಮುನ್ನ, ಪುಣೆ ವಲಯದ ಪದವೀಧರ ಕ್ಷೇತ್ರದಿಂದ ಪರಿಷತ್ತಿಗೆ ಆಯ್ಕೆಯಾಗಿದ್ದರು.

ಡಿಸೆಂಬರ್ 1 ರಂದು, ಮೂರು ಪದವೀಧರ ಮತ್ತು ಎರಡು ಶಿಕ್ಷರ ಕ್ಷೇತ್ರ ಮತ್ತು ಒಂದು ಸ್ಥಳೀಯ ಸ್ಥಾನ ಸೇರಿ ಒಟ್ಟು ಆರು ಪರಿಷತ್ತಿನ ಸದಸ್ಯ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಯಿತು.

ಐದು ಕ್ಷೇತ್ರಗಳಲ್ಲಿ ಎಂವಿಎ ಒಕ್ಕೂಟ ಎರಡು ಕ್ಷೇತ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿತು. ನಾಗಪುರ ವಲಯದ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂದೀಪ್ ಜೋಷಿಗಿಂತ, ಕಾಂಗ್ರೆಸ್‌ನ ಅಭಿಜಿತ್ ವಂಜರಿ ಮುನ್ನಡೆ ಸಾಧಿಸಿದ್ದರು. ಅಮರಾವತಿ ವಲಯದ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಕಿರಣ್ ಸರ್ನಾಯಕ್, ಶಿವಸೇನಾದ ಅಭ್ಯರ್ಥಿ ಶ್ರೀಕಾಂತ್ ದೇಶಪಾಂಡೆಗಿಂತ ಮುಂದಿದ್ದಾರೆ. 

ಚುನಾವಣೆ ಫಲಿತಾಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌, ‘ಕಳೆದ ಒಂದು ವರ್ಷದಲ್ಲಿ ಎಂವಿಎ ಒಕ್ಕೂಟ ಸರ್ಕಾರದ ಕಾರ್ಯವೈಖರಿಯನ್ನು ಈ ಫಲಿತಾಂಶಗಳು ಪ್ರತಿಬಿಂಬಿಸುತ್ತಿವೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು