ಮಂಗಳವಾರ, ಮೇ 17, 2022
27 °C
ಪಶ್ಚಿಮ ಬಂಗಾಳದ ರಾಜಕೀಯ ಪಕ್ಷಗಳ ನಡುವೆ ಕಿಡಿ ಹೊತ್ತಿಸಿದ ಘಟನೆ

ಡಿವೈಎಫ್‌ಐ ಕಾರ್ಯಕರ್ತ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತಾ: ಕಳೆದ ಗುರುವಾರ ಎಡಪಕ್ಷಗಳು ಆಯೋಜಿಸಿದ್ದ ‘ಸಚಿವಾಲಯ ಚಲೋ‘ ಮೆರವಣಿಗೆ ವೇಳೆ ಪೊಲೀಸರೊಂದಿಗೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿದ್ದ ಡಿವೈಎಫ್‌ಐ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಟಿಎಂಸಿ ಮತ್ತು ಎಡಪಕ್ಷಗಳ ನಡುವಿನ ರಾಜಕೀಯ ವಿರಸ ತೀವ್ರಗೊಂಡಿದೆ.

ಡಿವೈಎಫ್‌ಐ ಕಾರ್ಯಕರ್ತನ ಸಾವನ್ನು ಕೊಲೆ ಎಂದು ಸಿಪಿಎಂ ಕರೆದರೆ,  ಇದೊಂದು ‘ಆತ್ಮಹತ್ಯೆ’ ಎಂದು ಟಿಎಂಸಿ ಹೇಳಿದೆ.

ಬಂಕುರ ಜಿಲ್ಲೆಯ ಕೊತುಲ್‌ಪುರದ ನಿವಾಸಿ ಮೈದುಲಾ ಇಸ್ಲಾ ಮಿಡ್ಡಾ ಸಾವನ್ನಪ್ಪಿದ ಕಾರ್ಯಕರ್ತ. ಅವರ ಸಾವಿಗೆ ಸಂಬಂಧಿಸಿದಂತೆ ಷೇಕ್ಸ್‌ಪಿಯರ್ ಸರಾನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ತನಿಖೆ ನಡೆಸುತ್ತಿರುವುದಾಗಿ ಕೋಲ್ಕತಾ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು