ಸೋಮವಾರ, ಮೇ 23, 2022
28 °C

ಬಿಜೆಪಿಗೆ ಸೇರ್ಪಡೆಯಾಗಲಿರುವ 'ಮೆಟ್ರೊ ಮ್ಯಾನ್' ಇ ಶ್ರೀಧರನ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: 'ಮೆಟ್ರೊ ಮ್ಯಾನ್' ಖ್ಯಾತಿಯ ಇ. ಶ್ರೀಧರನ್ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಲಿದ್ದಾರೆ.

ಫೆಬ್ರುವರಿ 21ರಂದು ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ನಡೆಯಲಿರುವ 'ವಿಜಯ ಯಾತ್ರೆ'ಯಲ್ಲಿ ಇ. ಶ್ರೀಧರನ್ ಅವರು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇ. ಶ್ರೀಧರನ್ ದೆಹಲಿ ಮತ್ತು ಕೊಚ್ಚಿ ಮೆಟ್ರೊ ಯೋಜನೆಗಳ ಯಶಸ್ಸಿನ ಸೂತ್ರಧಾರರಾಗಿದ್ದಾರೆ. ಈ ಕಾರಣದಿಂದ ಅವರನ್ನು 'ಮೆಟ್ರೊ ಮ್ಯಾನ್' ಎಂದು ಕರೆಯಲಾಗುತ್ತದೆ.

 

 

 

ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಧುನಿಕ ಮೂಲಸೌಕರ್ಯಗಳ ವೃದ್ಧಿಯಲ್ಲಿ ಶ್ರೀಧರನ್ ಬಹುಮುಖ್ಯ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ: 

 

ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ವ್ಯಕ್ತಿಗಳನ್ನು ಸೆಳೆಯುವ ಮೂಲಕ ರಾಜಕೀಯ ರಣತಂತ್ರ ರೂಪಿಸುವಲ್ಲಿ ಪಕ್ಷಗಳು ಕಾರ್ಯಮಗ್ನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು