ಮಂಗಳವಾರ, ಜೂನ್ 15, 2021
27 °C

ಕುಪ್ವಾರ ಎನ್‌ಕೌಂಟರ್‌: ಪಾಕಿಸ್ತಾನಿ ಉಗ್ರನ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾದ ಉಗ್ರ ಪಾಕಿಸ್ತಾನಕ್ಕೆ ಸೇರಿದ ಉಗ್ರ. ಈತನನ್ನು ಡ್ಯಾನಿಶ್‌ ಎಂದು ಗುರುತಿಸಲಾಗಿದೆ.

‘ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಕಮಾಂಡರ್‌ ನಸೀರ್‌ ಉದ್ದೀನ್ ಲೋನ್‌ ಮತ್ತು ಪಾಕಿಸ್ತಾನಿ ಉಗ್ರ ಡ್ಯಾನಿಶ್‌‌ನನ್ನು ಹೊಡೆದುರುಳಿಸಲಾಗಿದೆ’ ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್ ಗುರುವಾರ ತಿಳಿಸಿದರು. 

‘ಏ.18ರಂದು ಸೊಪೋರದಲ್ಲಿ ಮೂರು ಸಿಆರ್‌ಪಿಎಫ್ ಯೋಧರನ್ನು ಮತ್ತು ಮೇ 4 ರಂದು ಹಂದ್ವಾರ‌ದಲ್ಲಿ ಮೂವರು ಯೋಧರನ್ನು ಹತ್ಯೆಗೈದ ಪ್ರಕರಣದಲ್ಲಿ ನಸೀರ್‌ ಉದ್ದೀನ್ ಭಾಗಿಯಾಗಿದ್ದ’ ಎಂದು ‌ಅವರು ತಿಳಿಸಿದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.