ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಟಾರ್ನಿ ಜನರಲ್‌ ಆಗಿ ನೇಮಿಸುವ ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ್ದೆ: ರೋಹಟಗಿ

Last Updated 25 ಸೆಪ್ಟೆಂಬರ್ 2022, 17:57 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಮುಂದಿನ ಅಟಾರ್ನಿ ಜನರಲ್‌ ಆಗಿ ನೇಮಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ನನ್ನ ಎದುರು ಇಟ್ಟಿತ್ತು. ಅದನ್ನು ತಿರಸ್ಕರಿಸಿದ್ದೆ’ ಎಂದು ಹಿರಿಯ ವಕೀಲ ಮುಕುಲ್‌ ರೋಹಟಗಿ ಭಾನುವಾರ ಹೇಳಿದ್ದಾರೆ.

‘ನನ್ನ ಈ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ’ ಎಂದು ಅವರು ತಿಳಿಸಿದ್ದಾರೆ.

ಸದ್ಯ ದೇಶದ ಅಟಾರ್ನಿ ಜನರಲ್‌ ಆಗಿರುವ ಕೆ.ಕೆ.ವೇಣುಗೋಪಾಲ್‌ (91) ಅವರ ಅಧಿಕಾರಾವಧಿಯು ಇದೇ 30ರಂದು ಮುಕ್ತಾಯವಾಗಲಿದೆ. ಹೀಗಾಗಿ ಕೇಂದ್ರವು ಈ ಹುದ್ದೆಗೆ ರೋಹಟಗಿ ಅವರನ್ನು ನೇಮಿಸಲು ತೀರ್ಮಾನಿಸಿತ್ತು.

ರೋಹಟಗಿ ಅವರು 2014ರ ಜೂನ್‌ನಿಂದ 2017ರ ಜೂನ್‌ವರೆಗೂ ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT