ಬುಧವಾರ, ಅಕ್ಟೋಬರ್ 21, 2020
24 °C

ವಸತಿ ಯೋಜನೆಗಳಲ್ಲಿ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜನವರಿಯಿಂದ ಸೆಪ್ಟೆಂಬರ್‌ ನಡುವಣ ಅವಧಿಯಲ್ಲಿ ದೇಶದಲ್ಲಿ ಮಾರಾಟಕ್ಕೆ ಸಿದ್ಧವಾದ ಮನೆಗಳ ಪ್ರಮಾಣದಲ್ಲಿ ಸರಿಸುಮಾರು ಶೇಕಡ 60ರಷ್ಟು ಕಡಿಮೆ ಆಗಿದೆ. ಕೋವಿಡ್–19 ಕಾರಣದಿಂದಾಗಿ ಡೆವಲಪರ್‌ಗಳು ಹೊಸ ಯೋಜನೆಗಳನ್ನು ಆರಂಭಿಸುವ ಕಾರ್ಯಕ್ಕೆ ಹೆಚ್ಚು ವೇಗ ನೀಡಲಿಲ್ಲ ಎಂದು ರಿಯಲ್ ಎಸ್ಟೇಟ್ ವಲಯದ ಸಲಹಾ ಸಂಸ್ಥೆ ಅನಾರೊಕ್ ಹೇಳಿದೆ.

ಜನವರಿಯಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಮಾರಾಟಕ್ಕೆ ಸಿದ್ಧವಾದ ಹೊಸ ಮನೆಗಳ ಸಂಖ್ಯೆಯು 75,150 ಮಾತ್ರ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಒಟ್ಟು 1.84 ಲಕ್ಷ ಮನೆಗಳು ಮಾರಾಟಕ್ಕೆ ಸಿದ್ಧವಾಗಿದ್ದವು. ಇದೇ ರೀತಿ, ಮನೆಗಳ ಮಾರಾಟದಲ್ಲಿಯೂ ಶೇಕಡ 57ರಷ್ಟು ಇಳಿಕೆ ಕಂಡುಬಂದಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು