ಸೋಮವಾರ, ಆಗಸ್ಟ್ 8, 2022
21 °C

ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚನೆ: ಅವಧಿ ವಿಸ್ತರಿಸಿದ ಎನ್‌ಜಿಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು (ಬಿಎಂಸಿ) ಹಾಗೂ ಜನರ ಜೀವವೈವಿಧ್ಯ ರಿಜಿಸ್ಟ್ರಿ (ಪಿಬಿಆರ್‌) ರಚನೆಗೆ ನೀಡಿದ್ದ ಅವಧಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಸ್ತರಿಸಿದೆ.

ಕೋವಿಡ್‌–19 ಪಿಡುಗಿನ ಕಾರಣ ಅವಧಿಯನ್ನು ವಿಸ್ತರಿಸಲಾಗಿದೆ ನ್ಯಾಯಮಂಡಳಿ ಹೇಳಿದೆ.

ಜೀವ ವೈವಿಧ್ಯ ಕಾಯ್ದೆ, 2002ರ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕೋರಿ ಪುಣೆ ಮೂಲದ ಚಂದ್ರಭಾಲ್‌ ಸಿಂಗ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ನ್ಯಾಯಪೀಠ ನಡೆಸಿತು.

‘ದೇಶವೇ ಕೋವಿಡ್‌–19 ವಿರುದ್ಧ ಹೋರಾಡುತ್ತಿದೆ. ಹೀಗಾಗಿ ಬಿಎಂಸಿ, ಪಿಬಿಆರ್‌ಗಳ ರಚನೆಯಲ್ಲಿ ವಿಳಂಬವಾಗಿದೆ. ಅದೇ ರೀತಿ ಜೀವವೈವಿಧ್ಯ ನಿಯಮಗಳ ಪಾಲನೆಗೆ ನೀಡಿದ್ದ ಅವಧಿಯನ್ನು 2021ರ ಜೂನ್‌ 30ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ನಿಯಮ ಪಾಲನೆ ಮಾಡಿದ್ದೇ ಆದಲ್ಲಿ, ನಿಯಮಗಳ ಉಲ್ಲಂಘನೆಗಾಗಿ ನೀಡಬೇಕಿದ್ದ ಪರಿಹಾರವನ್ನು ಮನ್ನಾ ಮಾಡಲಾಗುವುದು’ ಎಂದೂ ನ್ಯಾಯಪೀಠ ಹೇಳಿತು.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬಿಎಂಸಿ, ಪಿಬಿಆರ್‌ಗಳ ರಚನೆ ಸಾಧ್ಯವಾಗಿಲ್ಲ. ಇದಕ್ಕಾಗಿ ಸಮಯ ನೀಡಬೇಕು. ನಿಯಮಗಳ ಉಲ್ಲಂಘನೆಗಾಗಿ ಪಾವತಿಸಬೇಕಾಗಿರುವ ಪರಿಹಾರವನ್ನು ಸಹ ಮನ್ನಾ ಮಾಡುವಂತೆ ಕೆಲವು ರಾಜ್ಯಗಳು ಮನವಿ ಮಾಡಿದ್ದವು. ನ್ಯಾಯಪೀಠ ಈ ಮನವಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು