ಗುರುವಾರ , ಜೂನ್ 30, 2022
23 °C

ಕೋವಿಡ್‌-19: ವಿದೇಶಿ ಲಸಿಕೆ ಪರೀಕ್ಷೆ ನಿಯಮ ಸಡಿಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಕೋವಿಡ್‌-19ರ ವಿದೇಶಿ ಲಸಿಕೆಗಳ ಪ್ರತಿ ಬ್ಯಾಚ್‌ಗಳನ್ನೂ ಕೇಂದ್ರೀಯ ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುವ ನಿಯಮವನ್ನು ಭಾರತೀಯ ಪ್ರಧಾನ ಔಷಧ ನಿಯಂತ್ರಕರ (ಡಿಜಿಸಿಐ) ಸಂಸ್ಥೆಯು ಸಡಿಲಿಸಿದೆ. ಈ ನಿಯಮವನ್ನು ಸಡಿಲಿಸಿರುವ ಕಾರಣ, ದೇಶದಲ್ಲಿ ವಿದೇಶಿ ಲಸಿಕೆಗಳ ಲಭ್ಯತೆ ಸರಾಗವಾಗಲಿದೆ. ಚೀನಾದ ಸಿನೋವ್ಯಾಕ್ ಲಸಿಕೆಗೂ ಈ ವಿನಾಯಿತಿ ಅನ್ವಯವಾಗಲಿದೆ.

ಪ್ರತಿ ಬ್ಯಾಚ್‌ನ ಲಸಿಕೆಗಳನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂಬ ನಿಯಮವನ್ನು ಸಡಿಲಿಸಬೇಕು ಎಂಬ ಮನವಿಯನ್ನು ಫೈಝರ್ ಮತ್ತು ಸಿಪ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಮುಂದೆ ಇರಿಸಿದ್ದವು. ದೇಶದಲ್ಲಿ ಕೋವಿಡ್‌-19 ಹರಡುವುದನ್ನು ನಿಯಂತ್ರಿಸಲು ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಆದರೆ, ಈ ಕಾರ್ಯಕ್ರಮವನ್ನು ಮುಂದುವರಿಸಲು ಅಗಾಧ ಪ್ರಮಾಣದಲ್ಲಿ ಲಸಿಕೆಯ ಡೋಸ್‌ಗಳ ಅವಶ್ಯಕತೆ ಇದೆ. ಈ ಪರೀಕ್ಷೆಗಳನ್ನು ತಪ್ಪಿಸುವುದರಿಂದ ತ್ವರಿತವಾಗಿ ಲಸಿಕೆ ಪೂರೈಸಬಹುದು ಎಂದು ಡಿಜಿಸಿಐ ಹೇಳಿದೆ.

‘ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ, ಜಪಾನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ಬಳಕೆಗೆ ಹಾಗೂ ತುರ್ತು ಬಳಕೆಗೆ ಅನುಮತಿ ನೀಡಿರುವ ಲಸಿಕೆಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ’ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು