ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಉತ್ಪನ್ನ ಒಂದು ಜಿಲ್ಲೆ ಕಾರ್ಯಕ್ರಮ ಶೀಘ್ರ: ಪಿಯುಷ್ ಗೋಯಲ್

Last Updated 5 ಸೆಪ್ಟೆಂಬರ್ 2020, 17:32 IST
ಅಕ್ಷರ ಗಾತ್ರ

ನವದೆಹಲಿ: ‘ಒಂದು ಉತ್ಪನ್ನ ಒಂದು ಜಿಲ್ಲೆ ಕಾರ್ಯಕ್ರಮ ಜಾರಿಗೊಳಿಸುವ ಕುರಿತು ರಾಜ್ಯಗಳೊಂದಿಗೆ ಕೆಲಸ ಮಾಡಲಾಗುತ್ತಿದ್ದು, ಶೀಘ್ರವೇ ಅದನ್ನು ಜಾರಿಗೊಳಿಸಲಾಗುವುದು’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ತಿಳಿಸಿದ್ದಾರೆ.

‘ಪ್ರತಿಯೊಂದು ಜಿಲ್ಲೆಯೂ ತನ್ನೆಲ್ಲಾ ಸಂಪನ್ಮೂಲ ಬಳಸಿಕೊಂಡು ವಿಶೇಷ ಉತ್ಪನ್ನವೊಂದನ್ನು ಸಿದ್ಧಪಡಿಸುವ ಕುರಿತು ಗಮನ ಹರಿಸಲಿದೆ. ಈ ಉತ್ಪನ್ನಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಲಭ್ಯವಾಗುವಂತೆ ಮಾಡಬೇಕು’ ಎಂದು ಅವರು ಹೇಳಿದ್ದಾರೆ.

‘ತಯಾರಿಕೆಯನ್ನು ಉತ್ತೇಜಿಸಲು ಖಾಸಗಿ ವಲಯದ ಜತೆಗೂಡಿ ಸಚಿವಾಲಯವು 24 ಉತ್ಪನ್ನಗಳನ್ನು ಗುರುತಿಸಿದೆ. ಮುಂದಿನ ಐದು ವರ್ಷಗಳಲ್ಲಿ ₹ 20 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ತಯಾರಿಸುವ ವಿಶ್ವಾಸವಿದೆ. ಇದರಿಂದ ದೇಶದಲ್ಲಿ ಬಹಳಷ್ಟು ಜನರಿಗೆ ಉದ್ಯೋಗ ಸಿಗಲಿದ್ದು, ದೇಶದ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯೂ ಆಗಲಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT