ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವಾಳಿಯಿಂದ 16 ಸಾವಿರ, ನಿರುದ್ಯೋಗದಿಂದ 9,140 ಮಂದಿ ಆತ್ಮಹತ್ಯೆ

ರಾಜ್ಯಸಭೆ: 2018ರಿಂದ 2020ರ ವರೆಗಿನ ಮಾಹಿತಿ ನೀಡಿದ ಸಚಿವ ರಾಯ್
Last Updated 10 ಫೆಬ್ರುವರಿ 2022, 10:30 IST
ಅಕ್ಷರ ಗಾತ್ರ

ನವದೆಹಲಿ: ದಿವಾಳಿ ಅಥವಾ ಸಾಲಬಾಧೆಯಿಂದಾಗಿ ದೇಶದಲ್ಲಿ 2018 ರಿಂದ 2020ರ ಅವಧಿಯಲ್ಲಿ 16,000ಕ್ಕೂ ಅಧಿಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಇದೇ ಅವಧಿಯಲ್ಲಿ, ನಿರುದ್ಯೋಗದಿಂದಾಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 9,140 ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾಹಿತಿ ನೀಡಿದ್ದಾರೆ.

ದಿವಾಳಿ ಅಥವಾ ಸಾಲಬಾಧೆ ಪರಿಣಾಮ 2018ರಲ್ಲಿ 4,970 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, 2019ರಲ್ಲಿ 5,908 ಹಾಗೂ 2020ರಲ್ಲಿ 5,213 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಅವರು ರಾಜ್ಯಸಭೆಗೆ ತಿಳಿಸಿದರು.

ನಿರುದ್ಯೋಗದ ಕಾರಣದಿಂದ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 3,548. 2019ರಲ್ಲಿ 2,851 ಹಾಗೂ 2018ರಲ್ಲಿ 2,741 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವ ರಾಯ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT