ಶನಿವಾರ, ಜುಲೈ 2, 2022
22 °C
ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮತ ಚಲಾವಣೆ ಜಿಗಿತ

ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೊರತೆ: ಮುಖ್ಯ ಚುನಾವಣಾ ಆಯುಕ್ತರ ಬೇಸರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಅವರು ಬೇಸರ ವ್ಯಕ್ತಪಡಿಸಿದ್ದು, ಇತ್ತೀಚಿಗೆ ಮುಕ್ತಾಯವಾದ ಐದು ರಾಜ್ಯಗಳ ಚುನಾವಣೆ ಸೇರಿದಂತೆ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಮತದಾರರ ಮತ ಚಲಾವಣೆ ಸಂಖ್ಯೆ ಹೆಚ್ಚಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ಸಂಸತ್ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಮೊದಲ ಲೋಕಸಭೆಯಲ್ಲಿ 15 ಮಹಿಳಾ ಸಂಸದರಿದ್ದರು. ಇದೀಗ 17ನೇ ಲೋಕಸಭೆಯಲ್ಲಿ 78 ಮಹಿಳಾ ಸಂಸದರಿದ್ದಾರೆ. ಆದರೆ ಬೆಳವಣಿಗೆ ಮಾತ್ರ ಇನ್ನೂ ಮಂದಗತಿಯಲ್ಲಿದೆ ಎಂದು ಹೇಳಿದರು.

ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತಲೂ ಹೆಚ್ಚು ಮತ ಚಲಾವಣೆ ಮಾಡಿದ್ದಾರೆ. ಪಂಜಾಬ್‌ನಲ್ಲಿ ಮಹಿಳೆಯರು ಮತ್ತು ಪುರುಷ ಮತದಾರರ ಸಂಖ್ಯೆ ಬಹುತೇಕ ಸಮವಾಗಿತ್ತು ಎಂದು ಅವರು ಹೇಳಿದರು.

ಅಲ್ಲದೆ ಸಂಸತ್ತಿನ ಕಲಾಪಗಳಲ್ಲಿ ಪ್ರತಿಪಕ್ಷ ಮತ್ತು ಆಡಳಿತಾರೂಢ ಪಕ್ಷಗಳ ನಡುವಿನ ವಾಗ್ವಾದದಿಂದ ಕಲಾಪಗಳು ಬಲಿಯಾಗುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಅವರು, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.  ಪ್ರಶ್ನೋತ್ತರ ಮತ್ತು ಶೂನ್ಯ ವೇಳೆಯನ್ನು ಸಂಸತ್ತು ಪಾಲಿಸಿಕೊಂಡು ಬರುತ್ತಿದೆ. ಇಂಥ ಅಮೂಲ್ಯವಾದ ಅವಕಾಶವನ್ನು ಘೋಷಣೆಗಳನ್ನು ಮೊಳಗಿಸುವ ಅಥವಾ ನಾಟಕೀಯ ಅಥವಾ ಸದನದ ಬಾವಿಗಿಳಿದು ಪ್ರತಿಭಟಿಸುವ ಮೂಲಕ ವ್ಯರ್ಥ ಮಾಡಬಾರದು ಎಂದು ಸಂಸದರಿಗೆ ಕಿವಿಮಾತು ಹೇಳಿದರು. 

ಸಂವಿಧಾನವು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಪ್ರಮಾಣದ ಮೀಸಲಾತಿಯನ್ನು ನೀಡಿದೆ. ತಳಮಟ್ಟದ ಮಹಿಳೆಯರು ತಮ್ಮ ನಾಯಕತ್ವದ ಗುಣಗಳನ್ನು ತೋರಿಸಿದ್ದಾರೆ ಮತ್ತು ಅವರು ತಮ್ಮ ಸಮುದಾಯಗಳಲ್ಲಿ ಗಣನೀಯ ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು