ಶುಕ್ರವಾರ, ಅಕ್ಟೋಬರ್ 23, 2020
21 °C

ಉಭಯ ದೇಶಗಳ ಬಾಂಧವ್ಯ ವೃದ್ಧಿ ಕುರಿತು ಭಾರತ - ಶ್ರೀಲಂಕಾ ಪ್ರಧಾನಿಗಳ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಮುಖ ಕ್ಷೇತ್ರಗಳಲ್ಲಿ ಉಭಯ ದೇಶಗಳು ಪರಸ್ಪರ ಸಹಕಾರ, ಬಾಂಧವ್ಯ ವೃದ್ಧಿ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಜೊತೆಗೆ ಚರ್ಚಿಸಿದರು.

ವರ್ಚುಯೆಲ್ ಸಭೆಯಲ್ಲಿ ಮೋದಿ ಅವರು, 'ಶ್ರೀಲಂಕಾದಲ್ಲಿ ಆಡಳಿತರೂಢ ಪಕ್ಷ  ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತಗಳಿಸಿರುವುದು ಉಭಯ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ನೆರವಾಗಲಿದೆ' ಎಂದು ಆಶಿಸಿದರು.

'ಭಾರತ ಮತ್ತು ಶ್ರೀಲಂಕಾ ನಡುವೆ ಹೊಸ ಅಧ್ಯಾಯವನ್ನು ಶುರುಮಾಡುವ ಅವಕಾಶ ನಮಗೆ ಬಂದೊಗಿದೆ. ಉಭಯ ದೇಶಗಳ ನಡುವಣ ಜನರೂ ಇಂಥ ಬೆಳವಣಿಗೆಯನ್ನು ಹೊಸ ನಿರೀಕ್ಷೆಗಳೊಂದಿಗೆ ಗಮನಿಸುತ್ತಿದ್ದಾರೆ' ಎಂದೂ ಮೋದಿ ಹೇಳಿದರು.

ರಾಜಪಕ್ಸ ಅವರು ಶ್ರೀಲಂಕಾದ ಪ್ರಧಾನಿಯಾಗಿ ಆ. 9ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಶ್ರೀಲಂಕಾ ಜೊತೆಗಿನ ಸಂಬಂಧ ವೃದ್ಧಿಗೆ ಭಾರತ ಆದ್ಯತೆ ನೀಡಲಿದೆ ಎಂದ ಮೋದಿ ಅವರು 'ಸಾಗರ್' (ಸರ್ವ ವಲಯಗಳಲ್ಲೂ ಸುರಕ್ಷತೆ ಮತ್ತು ಅಭಿವೃದ್ಧಿ) ಯೋಜನೆ ಕುರಿತ ನೀತಿ ಉಲ್ಲೇಖಿಸಿದರು.

ರಕ್ಷಣಾ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಸಂಬಂಧಿಸಿ ಮುಖಂಡರು ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು