ಗುರುವಾರ , ಆಗಸ್ಟ್ 11, 2022
21 °C

ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಜನ್ಮ ದಿನಾಚರಣೆ: ಪ್ರಧಾನಿ ಮೋದಿಯಿಂದ ಗೌರವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗೌರವ ನಮನ ಸಲ್ಲಿಸಿದರು.

‘ರಾಜೇಂದ್ರ ಪ್ರಸಾದ್‌ ಅವರು ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನಕ್ಕೆ ಸಾಟಿಯಿಲ್ಲದ ಕೊಡುಗೆ ನೀಡಿದ್ದಾರೆ. ಅವರ ಸರಳ ಜೀವನ ಮತ್ತು ಉನ್ನತ ಆದರ್ಶಗಳು ಜನರಿಗೆ ಸದಾ ಸ್ಪೂರ್ತಿ ನೀಡುತ್ತದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. 

1884 ರಲ್ಲಿ ಬಿಹಾರದಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್, ಮಹಾತ್ಮ ಗಾಂಧಿ ಅವರ ಆಪ್ತರಾಗಿದ್ದರು. ಇವರು ಭಾರತದ ಮೊದಲ ರಾಷ್ಟ್ರಪತಿ.

ರಾಜೇಂದ್ರ ಪ್ರಸಾದ್‌ ಅವರು ಒಂದು ಅವಧಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಏಕೈಕ ರಾಷ್ಟ್ರಪತಿಯಾಗಿದ್ದಾರೆ. ಇವರು 1950 ರಿಂದ 62 ತನಕ ರಾಷ್ಟ್ರಪತಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು