ಸೋಮವಾರ, ಸೆಪ್ಟೆಂಬರ್ 27, 2021
22 °C

ಮೋದಿಗೆ ಜಾಗತಿಕ ಉನ್ನತ ಶ್ರೇಣಿ ಸಿಗಲು ಜನಪರ ನೀತಿ ಕಾರಣ ಎಂದ ಬಿಜೆಪಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಧಿಕ ಶ್ರೇಣಿಯನ್ನು ಹೊಂದಿದ ನಾಯಕ ಎಂಬ ಜಾಗತಿಕ ಅಧ್ಯಯನವನ್ನು ಉಲ್ಲೇಖಿಸಿರುವ ಬಿಜೆಪಿ, ಇದು ಅವರ ಜನಪರ ನೀತಿಗಳಿಗೆ ದೊರೆತ ಮನ್ನಣೆ ಎಂದಿದೆ.

ಜಾಗತಿಕ ನಾಯಕರ ಜನಪ್ರಿಯತೆ ಕುರಿತು ಶ್ರೇಣಿ ನೀಡುವ ‘ಮಾರ್ನಿಂಗ್‌ ಕನ್ಸಲ್ಟ್‘ ಸಮೀಕ್ಷೆಯಲ್ಲಿ ಶೇ 70ರಷ್ಟು ಮಾನ್ಯತೆಯೊಂದಿಗೆ ಪ್ರಧಾನಿಗೆ ಉನ್ನತ ಸ್ಥಾನ ದೊರೆತಿತ್ತು. ನಂತರ ಸ್ಥಾನಗಳಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರಿದ್ದರು.

ಪ್ರಧಾನಿಗೆ ಅತ್ಯುನ್ನತ ಶ್ರೇಣಿ ದೊರೆತಿರುವುದು ದೇಶಕ್ಕೆ ಹೆಮ್ಮೆಯ ಸಂಗತಿ. ಸಮೂಹದ ಕಲ್ಯಾಣಕ್ಕಾಗಿ ಅವರು ರೂಪಿಸಿದ ನೀತಿಗಳು, ಜನರ ಆಶೀರ್ವಾದ ಇದಕ್ಕೆ ಕಾರಣ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದ್ದಾರೆ.

ಪಕ್ಷದ ವಕ್ತಾರ, ರಾಜ್ಯಸಭೆ ಸದಸ್ಯ ಅನಿಲ್‌ ಬಲೂನಿ ಅವರು, ಮೋದಿ ಅವಧಿಯಲ್ಲಿ ಭಾರತದ ಪ್ರತಿಷ್ಠೆಯು ಅನಿರೀಕ್ಷಿತವಾದ ರೀತಿಯಲ್ಲಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು