ಬುಧವಾರ, ಅಕ್ಟೋಬರ್ 20, 2021
25 °C

ದೀಪಾವಳಿಗೆ ತಲಾ ಎರಡು ದೀಪ ಬೆಳಗಿಸಿ: ಪಿಎಂಎವೈ ಫಲಾನುಭವಿಗಳಿಗೆ ಮೋದಿ ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ (ಪಿಎಂಎವೈ) ಒಂಬತ್ತು ಲಕ್ಷ ಫಲಾನುಭವಿಗಳು ದೀಪಾವಳಿಯಂದು ತಲಾ ಎರಡು ಮಣ್ಣಿನ ಹಣತೆಗಳನ್ನು ಬೆಳಗಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮನವಿ ಮಾಡಿದ್ದು, ಅಯೋಧ್ಯೆಯಲ್ಲಿ 7.5 ಲಕ್ಷ ಹಣತೆಗಳನ್ನು ಬೆಳಗಿಸುವುದರಿಂದ ಅಂದು ಭಗವಂತ ರಾಮ ಸಂತುಷ್ಟನಾಗಲಿದ್ದಾನೆ ಎಂದು ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ‘ಉತ್ತರ ಪ್ರದೇಶದಲ್ಲಿ ಪಿಎಂಎವೈನ ಒಂಬತ್ತು ಲಕ್ಷ ಫಲಾನುಭವಿಗಳಿದ್ದಾರೆ. ಪ್ರತಿ ಮನೆಯಲ್ಲಿ ಎರಡು ದೀಪಗಳನ್ನು ಬೆಳಗಿಸಿದರೆ, 18 ಲಕ್ಷ ದೀಪಗಳನ್ನು ದೀಪಾವಳಿಯಲ್ಲಿ ಬೆಳಗಿದಂತಾಗಲಿದೆ. ಅಯೋಧ್ಯೆಯಲ್ಲಿ 7.5 ಲಕ್ಷ ದೀಪಗಳನ್ನು ಬೆಳಗಿಸುವ ಯೋಜನೆ ಇದೆ. ಇದು ಭಗವಾನ್ ರಾಮನನ್ನು ಸಂತೋಷಪಡಿಸುತ್ತದೆ’ ಎಂದರು.

ಓದಿ: 

ತಮ್ಮ ಸರ್ಕಾರವು ಪಿಎಂಎವೈ ಅಡಿಯಲ್ಲಿ ಮನೆಗಳ ಆಸ್ತಿ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದೆ. ಇಲ್ಲಿಯವರೆಗೆ ಎಲ್ಲವೂ ಗಂಡ ಅಥವಾ ಮಗನ ಹೆಸರಿನಲ್ಲಿತ್ತು. ಆರೋಗ್ಯಕರ ಸಮಾಜದಲ್ಲಿ ಸಮತೋಲನ ಇರಬೇಕಬೇಕೆಂದು ಈ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದರು.

‘2014ಕ್ಕೂ ಮೊದಲು ಮನೆಯ ಗಾತ್ರ ನಿರ್ಧರಿಸುವ ಯಾವುದೇ ನೀತಿ ಇರಲಿಲ್ಲ. ಕೆಲವು ಸ್ಥಳಗಳಲ್ಲಿ ಮನೆಗಳನ್ನು 15 ಚದರ ಮೀಟರ್‌ಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ 17 ಚದರ ಮೀಟರ್‌ಗಳಲ್ಲಿ ನಿರ್ಮಿಸಲಾಗಿದೆ. ನಮ್ಮ ಸರ್ಕಾರವು 22 ಚದರ ಮೀಟರ್‌ಗಿಂತ ಕಡಿಮೆ ಜಾಗದಲ್ಲಿ ಯಾವುದೇ ಮನೆ ನಿರ್ಮಿಸಬಾರದೆಂದು ನಿರ್ಧರಿಸಿತು. ನಾವು ನಿವೇಶನದ ಗಾತ್ರವನ್ನು ಹೆಚ್ಚಿಸಿದ್ದೇವೆ. ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣವನ್ನೂ ವರ್ಗಾಯಿಸುತ್ತಿದ್ದೇವೆ’ ಎಂದು ಮೋದಿ ಹೇಳಿದರು.

ದಾಖಲೆ ನಿರ್ಮಿಸಲು ಯೋಗಿ ಸರ್ಕಾರ ಸಿದ್ಧತೆ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾದ ನಂತರ, ಅಯೋಧ್ಯೆಯಲ್ಲಿ ‘ದಿಯಾಸ್’ (ಮಣ್ಣಿನ ದೀಪಗಳನ್ನು) ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಗುತ್ತಿದೆ. ಈ ವರ್ಷ, ಆದಿತ್ಯನಾಥ್ ಸರ್ಕಾರ ತನ್ನ ಹಿಂದಿನ ದಾಖಲೆ ಮುರಿಯುವ ಯೋಜನೆಯಲ್ಲಿದೆ.

ಅಯೋಧ್ಯೆಯಲ್ಲಿ ಈ ಬಾರಿಯದು ಐದನೇ ದೀಪೋತ್ಸವ. ಜಿಲ್ಲಾಡಳಿತವು ಈ ಬೃಹತ್‌ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳನ್ನು ಆರಂಭಿಸಿದೆ.

ಓದಿ: 

2019ರಲ್ಲಿ, ಅಯೋಧ್ಯೆಯಲ್ಲಿ ದಾಖಲೆಯ 4,10,000 ಹಣತೆಗಳನ್ನು ಬೆಳಗಿಸಲಾಗಿತ್ತು. 2020ರಲ್ಲಿ ನಾಲ್ಕನೇ ದೀಪೋತ್ಸವದ ವೇಳೆ ಜಿಲ್ಲಾ ಆಡಳಿತವು ರಾಮ್ ಕಿ ಪೈಡಿ ಘಾಟ್ ಮತ್ತು ಇತರ ಕೆಲವು ಘಾಟ್‌ಗಳಲ್ಲಿ 6,06,569 ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು