ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟಿಸಿದ ಮೋದಿ

‘ರಾಷ್ಟ್ರೀಯ ಪ್ರಾಮುಖ್ಯ’ ಮಾನ್ಯತೆ ಪಡೆದ ಸಂಸ್ಥೆ
Last Updated 13 ನವೆಂಬರ್ 2020, 10:05 IST
ಅಕ್ಷರ ಗಾತ್ರ

ಜಾಮ್‌ನಗರ, ಗುಜರಾತ್‌: ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನ ಮಂತ್ರಿ ಉದ್ಘಾಟಿಸಿದ ಈ ಸಂಸ್ಥೆಯಲ್ಲಿ ಆಯುರ್ವೇದದಲ್ಲಿ ಹೊಸದಾಗಿ ರೂಪುಗೊಂಡ ಬೋಧನಾ ಮತ್ತು ಸಂಶೋಧನಾ ಸಂಸ್ಥೆಗೆ (ಐಟಿಆರ್‌ಎ) ‘ರಾಷ್ಟ್ರೀಯ ಪ್ರಾಮುಖ್ಯ ಸಂಸ್ಥೆ‘ (ಐಎನ್‌ಐ) ಸ್ಥಾನಮಾನ ನೀಡಲಾಗಿದೆ.

ಜಾಮ್‌ನಗರ ನಗರದ ವಿಶ್ವವಿದ್ಯಾಲಯದ ಆವರಣದಲ್ಲಿರುವ ನಾಲ್ಕು ಸಂಸ್ಥೆಗಳಾದ ಆಯುರ್ವೇದ ಸ್ನಾತಕೋತ್ತರ ಬೋಧನೆ ಮತ್ತು ಸಂಶೋಧನಾ ಸಂಸ್ಥೆ, ಶ್ರೀಗುಲಾಬ್ ಕುನ್ವರ್ಬಾ ಆಯುರ್ವೇದ ಮಹಾವಿದ್ಯಾಲಯ, ಆಯುರ್ವೇದ ಔಷಧ ವಿಜ್ಞಾನ ಸಂಸ್ಥೆ ಮತ್ತು ಮಹರ್ಷಿ ಪತಂಜಲಿ ಇನ್ಸ್ಟಿಟ್ಯೂಟ್ ಫಾರ್ ಯೋಗ ನ್ಯಾಚುರೊಪತಿ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆಗಳನ್ನು ವಿಲೀನಗೊಳೀಸಿ ಐಟಿಆರ್‌ಎ ರಚಿಸಲಾಗಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಈ ಆಯುರ್ವೇದ ವೈದ್ಯಕೀಯ ಸಂಸ್ಥೆಗಳ ಕ್ಲಸ್ಟರ್‌ಗೆ ರಾಷ್ಟ್ರೀಯ ಪ್ರಾಮುಖ್ಯ ನೀಡುವ ‘ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ–2020‘ ಕಾಯ್ದೆ ಜಾರಿಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT