ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿ: ಬಿರ್ಸಾಮುಂಡಾ ಸ್ಮರಣಾರ್ಥ ಮ್ಯೂಸಿಯಂ, ಉದ್ಯಾನ ಉದ್ಘಾಟಿಸಿದ ಪ್ರಧಾನಿ

Last Updated 15 ನವೆಂಬರ್ 2021, 8:47 IST
ಅಕ್ಷರ ಗಾತ್ರ

ರಾಂಚಿ: ’ಧರ್ತಿ ಆಬಾ’ ಎಂದೇ ಖ್ಯಾತರಾಗಿರುವ, ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ರಾಂಚಿಯಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದರು.

ವರ್ಚುವಲ್ ಆಗಿ ನಡೆದ ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ಧರ್ತಿ ಆಬಾಅವರು ಹೆಚ್ಚು ಕಾಲ ಜೀವಿಸಲಿಲ್ಲ. ಆದರೆ ಅವರು ದೇಶದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ದೇಶದ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ನೀಡಿದ್ದಾರೆ’ ಎಂದರು.

ಬಿರ್ಸಾ ಮುಂಡಾ ಅವರಿಗೆ ಗೌರವ ನಮನ ಸಲ್ಲಿಸಿದ ಮೋದಿಯವರು, ’ಭಾರತದ ಬುಡಕಟ್ಟು ಸಮುದಾಯದ ಅಸ್ಮಿತೆಯನ್ನು ಅಳಿಸುವ ಸಿದ್ಧಾಂತದ ವಿರುದ್ಧ ಅವರು ಹೋರಾಡಿದರು’ ಎಂದು ನೆನಪಿಸಿಕೊಂಡರು.

’ಆಧುನಿಕತೆಯ ಹೆಸರಿನಲ್ಲಿ ವೈವಿಧ್ಯದ ಮೇಲೆ ದಾಳಿ ಮಾಡುವುದು, ಪ್ರಾಚೀನ ಅಸ್ಮಿತೆ ಮತ್ತು ಪ್ರಕೃತಿಯನ್ನು ನಾಶ ಮಾಡುವುದು ಸಮಾಜವನ್ನು ಕಲ್ಯಾಣದತ್ತ ಕೊಂಡೊಯ್ಯುವ ಮಾರ್ಗವಲ್ಲ’ ಎಂಬುದನ್ನು ಭಗವಾನ್ ಬಿರ್ಸಾ ಅರಿತಿದ್ದರು. ಆಧುನಿಕ ಶಿಕ್ಷಣದ ಪರವಾಗಿದ್ದ ಅವರು ಬದಲಾವಣೆಯ ಪ್ರತಿಪಾದಕರಾಗಿದ್ದರು. ಅವರದೇ ಸಮಾಜದ ನ್ಯೂನತೆಗಳನ್ನು ಗುರುತಿಸಿ, ಅದರ ವಿರುದ್ಧ ಹೋರಾಟ ನಡೆಸಿದ್ದರು’ ಎಂದು ಪ್ರಧಾನಿ ಸ್ಮರಿಸಿದರು.

ಜಾರ್ಖಂಡ್ ರಾಜ್ಯದ ನಾಗರಿಕರು ಮತ್ತು ರಾಜ್ಯ ಬುಡಕಟ್ಟು ಸಮುದಾಯವನ್ನು ಅಭಿನಂದಿಸಿದ ಮೋದಿ ಅವರು, ಬಿರ್ಸಾ ಮುಂಡಾ ಸ್ಮಾರಕ ಉದ್ಯಾನ ಮತ್ತು ವಸ್ತು ಸಂಗ್ರಹಾಲಯವನ್ನು ದೇಶಕ್ಕೆ ಸಮರ್ಪಿಸಿದರು.

ಜಾರ್ಖಂಡ್ ರಾಜ್ಯೋತ್ಸವ ದಿನದಂದು ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಕೊನೆಯುಸಿರೆಳೆದ ರಾಂಚಿಯ ಹಳೆಯ ಕಾರಾಗೃಹದಲ್ಲಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗಿದ್ದು, ಅದರಲ್ಲಿ 25 ಅಡಿ ಎತ್ತರದ ಮುಂಡಾ ಅವರ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT