ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮೇಲೆ ಕಾಳಿ ಮಾತೆ ಆಶೀರ್ವಾದ ಸದಾ ಇರಲಿದೆ: ಪ್ರಧಾನಿ ನರೇಂದ್ರ ಮೋದಿ

Last Updated 10 ಜುಲೈ 2022, 11:41 IST
ಅಕ್ಷರ ಗಾತ್ರ

ಕೋಲ್ಕತ್ತ/ನವದೆಹಲಿ: ‘ಕಾಳಿ ಮಾತೆಯ ಆಶೀರ್ವಾದ ಈ ದೇಶದ ಮೇಲೆ ಸದಾಕಾಲವೂ ಇರಲಿದೆ’ ಎಂದು‍ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ರಾಮಕೃಷ್ಣ ಮಿಷನ್‌ ಹಮ್ಮಿಕೊಂಡಿದ್ದ ಸ್ವಾಮಿ ಆತ್ಮಸ್ಥಾನಾನಂದ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಪಾಲ್ಗೊಂಡು ಅವರು ಭಾನುವಾರ ಮಾತನಾಡಿದರು.

‘ದೇಶದಲ್ಲಿರುವ ಸಂತರು ‘ಏಕ ಭಾರತ, ಶ್ರೇಷ್ಠ ಭಾರತ’ ಆಶಯದ ಸಾಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಮಕೃಷ್ಣ ಪರಮಹಂಸ ಅವರು ಕಾಳಿ ಮಾತೆಯ ಕುರಿತು ಸ್ಪಷ್ಟ ಕಲ್ಪನೆ ಹೊಂದಿದ್ದರು. ಅವರ ಶಿಷ್ಯ ಸ್ವಾಮಿ ವಿವೇಕಾನಂದ ಕೂಡ ಆಧ್ಯಾತ್ಮಿಕ ದೃಷ್ಟಿಕೋನ ಹೊಂದಿದ್ದರು. ಇದು ಅವರಲ್ಲಿ ಅಸಾಧಾರಣ ಶಕ್ತಿ ತುಂಬಿತ್ತು’ ಎಂದು ಹೇಳಿದ್ದಾರೆ.

‘ನಂಬಿಕೆ ಪವಿತ್ರವಾಗಿದ್ದರೆ ಅಗೋಚರ ಶಕ್ತಿಯೊಂದು ನಮಗೆ ಅರಿವಿಲ್ಲದಂತೆಯೇ ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯುತ್ತದೆ. ಕಾಳಿ ಮಾತೆಯ ಕೃಪೆ ಭಾರತದ ಮೇಲೆ ಇದೆ. ಆಧ್ಯಾತ್ಮಿಕ ಶಕ್ತಿಯೊಂದಿಗೆ ದೇಶವು ಲೋಕ ಕಲ್ಯಾಣದ ಕಾಯಕದಲ್ಲಿ ಮುನ್ನಡೆಯುತ್ತಿದೆ’ ಎಂದಿದ್ದಾರೆ.

‘ನನಗೆಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿ ಕಾಣುತ್ತಾಳೆ’ಎಂದು ತೃಣಮೂಲ ಕಾಂಗ್ರೆಸ್ ಸಂಸದೆಮಹುವಾಮೊಯಿತ್ರಾಇತ್ತೀಚೆಗೆ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.ಮಹುವಾ ಅವರ ಹೇಳಿಕೆ ಉಲ್ಲೇಖಿಸದೆಯೇ ಮೋದಿ ಅವರು ಕಾಳಿ ಮಾತೆಯ ಶಕ್ತಿಯ ಕುರಿತು ಮಾತನಾಡಿದ್ದಾರೆ.

‘ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಭಾರತವು ವಿಶ್ವದ ನಾಯಕನಾಗಿ ಬೆಳೆದಿದೆ’ ಎಂದೂ ಅವರು ಹೇಳಿದ್ದಾರೆ.

‘75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ‘75 ಅಮೃತ ಸರೋವರ’ ಸ್ಥಾಪನೆಯ ಅಭಿಯಾನ ಆರಂಭಿಸಿದ್ದೇವೆ. ಇದರ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಕೆರೆ ಅಭಿವೃದ್ಧಿಪಡಿಸಲಾಗುತ್ತದೆ. ಸಂತರು ಜನರ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕನಲ್ಲೂ ಸ್ಫೂರ್ತಿ ತುಂಬಬೇಕು’ ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT