ಭಾನುವಾರ, ಮಾರ್ಚ್ 7, 2021
32 °C

ಗುರುಗೋವಿಂದ್‌ ಸಿಂಗ್‌ 354ನೇ ಜನ್ಮ ದಿನಾಚರಣೆ: ಪ್ರಧಾನಿ ಮೋದಿ ಗೌರವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗುರುಗೋವಿಂದ್‌ ಸಿಂಗ್‌ ಅವರ 354ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗೌರವ ನಮನ ಸಲ್ಲಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,‘ನಾನು ಗುರುಗೋವಿಂದ್‌ ಅವರಿಗೆ ತಲೆ ಬಾಗುತ್ತೇನೆ. ಅವರು ತಮ್ಮ ಜೀವನವನ್ನು ಸಮಾಜಕ್ಕಾಗಿ ಮೀಸಲಿಟ್ಟಿದ್ದರು‘ ಎಂದಿದ್ದಾರೆ.

‘ಗುರುಗೋವಿಂದ್ ಸಿಂಗ್‌ ಅವರು ತಮ್ಮ ತತ್ವಗಳನ್ನು ಅಚಲವಾಗಿ ಎತ್ತಿ ಹಿಡಿದರು. ಅವರ ಧೈರ್ಯ ಮತ್ತು ತ್ಯಾಗಗಳನ್ನು ನಾವು ಸದಾ ಸ್ಮರಿಸುತ್ತೇವೆ’ ಎಂದು ಅವರು ಹೇಳಿದರು. ಇದರೊಂದಿಗೆ ಮೋದಿ,  ಗುರು ಗೋವಿಂದ್‌ ಸಿಂಗ್‌ ಅವರ ಬಗೆಗಿನ ವಿಡಿಯೊದ ತುಣುಕೊಂದನ್ನು ಹಂಚಿಕೊಂಡಿದ್ದಾರೆ.

ಗುರುಗೋವಿಂದ್‌ ಸಿಂಗ್‌ ಅವರು 10ನೇ ಸಿಖ್‌ ಗುರುಗಳಾಗಿದ್ದಾರೆ. ಅವರು ತತ್ವಶಾಸ್ತ್ರಜ್ಞ, ಕವಿ ಮತ್ತು ದಾರ್ಶನಿಕರಾಗಿ ಖ್ಯಾತಿ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು