ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ, ಧರ್ಮ ಜನರನ್ನು ಒಟ್ಟುಗೂಡಿಸಬೇಕು: ಮಲಯಾಳಂ ಲೇಖಕ ಜೇ‌ಮ್ಸ್‌

Last Updated 24 ನವೆಂಬರ್ 2021, 9:28 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಧಾರ್ಮಿಕ ನಂಬಿಕೆಗಳು ಮತ್ತು ರಾಜಕೀಯ ಒಲವು ಜನರನ್ನು ಒಂದುಗೂಡಿಸುವ ಬದಲು ವಿಭಜಿಸುತ್ತಿರುವುದು ದುಃಖಕರ’ ಎಂದು ಮಲಯಾಳ ಲೇಖಕ ವಿ.ಜೆ.ಜೇಮ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಹೊಸ ಪುಸ್ತಕ ‘ಆ್ಯಂಟಿ ಕ್ಲಾಕ್‌’ನಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜೇಮ್ಸ್‌ ಅವರು ಕೇರಳ ರಾಜಧಾನಿ ತಿರುವನಂತಪುರದಲ್ಲಿರುವ ವಿಕ್ರಮ್‌ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದಲ್ಲಿ ಎಂಜಿನಿಯರ್‌ ಆಗಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ಇ–ಮೇಲ್‌ ಮೂಲಕ ಸಂದರ್ಶನ ನೀಡಿರುವ ಅವರು, ದೇಶದಲ್ಲಿನ ಅಸಮಾನತೆಗಳು ಹಾಗೂ ಏಕತೆ ಸಾಧಿಸುವ ಕುರಿತು ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದಾರೆ.

‘ಯಾವುದೇ ಧರ್ಮದಲ್ಲಿ ನಿಜವಾದ ನಂಬಿಕೆಯುಳ್ಳ ವ್ಯಕ್ತಿ ಇತರರನ್ನು ಭ್ರಾತೃತ್ವ ಭಾವನೆಯಿಂದ ನೋಡುತ್ತಾನೆ ಎಂಬುದು ನನ್ನ ನಂಬಿಕೆ’ ಎಂದು ಹೇಳಿದ್ದಾರೆ.

‘ಯಾವುದೇ ಧಾರ್ಮಿಕ ಅಥವಾ ರಾಜಕೀಯ ದೃಷ್ಟಿಕೋನದ ಮಿತಿಯನ್ನು ಮೀರಿದ ದೃಷ್ಟಿಕೋನ ಹೊಂದುವಂತೆ ನನ್ನ ಕೃತಿ ಆ್ಯಂಟಿ ಕ್ಲಾಕ್‌ ಓದುಗರಿಗೆ ಆಹ್ವಾನ ನೀಡುತ್ತದೆ’ ಎಂದೂ ಅವರು ವಿವರಿಸಿದ್ದಾರೆ.

288 ಪುಟಗಳ, ಮಲಯಾಳ ಭಾಷೆಯಲ್ಲಿರುವ ಈ ಪುಸ್ತಕವನ್ನು ಮಿನಿಸ್ಥಿ ಎಸ್‌. ಅವರು ಇಂಗ್ಲೀಷ್‌ಗೆ ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT