ಭಾನುವಾರ, ಜೂನ್ 20, 2021
22 °C

ಹದಿನೈದು ದಿನಗಳೊಳಗೆ 'ಪ್ರಾಜೆಕ್ಟ್ ಡಾಲ್ಫಿನ್’ ಘೋಷಣೆ: ಸಚಿವ ಪ್ರಕಾಶ್ ಜಾವಡೇಕರ್

ಪಿಟಿಐ Updated:

ಅಕ್ಷರ ಗಾತ್ರ : | |

Dolphin

ನವದೆಹಲಿ: ಇನ್ನು ಹದಿನೈದು ದಿನಗಳೊಳಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ’ಪ್ರಾಜೆಕ್ಟ್‌ ಡಾಲ್ಫಿನ್’ ಯೋಜನೆಯನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್‌ ಮಾಡಿದ್ದಾರೆ.

74ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ’ಪ್ರಾಜೆಕ್ಟ್ ಡಾಲ್ಫಿನ್’ ಯೋಜನೆ ಪ್ರಸ್ತಾಪಿಸುತ್ತಾ, ದೇಶದಲ್ಲಿ ಜೀವವೈವಿಧ್ಯ ಉತ್ತೇಜಿಸುವ ಜತೆಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಈ ಯೋಜನೆ ಸಹಕಾರಿ ಎಂದು ಹೇಳಿದ್ದಾರೆ. ಇದನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಜಾವಡೇಕರ್, ’ಇನ್ನು ಹದಿನೈದು ದಿನಗಳಲ್ಲಿ ಡಾಲ್ಫಿನ್ ಯೋಜನೆಯನ್ನು ಪ್ರಧಾನಿಯವರು ಘೋಷಿಸಲಿದ್ದಾರೆ’ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ಯೋಜನೆಯಲ್ಲಿ ನದಿ ಮತ್ತು ಸಾಗರ ಎರಡೂ ಕಡೆಗಳಲ್ಲಿ ಜೀವಿಸುವ ಡಾಲ್ಫಿನ್‌ಗಳ ರಕ್ಷಣೆಗೆ ಒತ್ತು ನೀಡಲಾಗುತ್ತದೆ. ಈ ಕ್ರಮದಿಂದ ಜೀವವೈವಿಧ್ಯಕ್ಕೆ ಉತ್ತೇಜನ ನೀಡುವ ಜತೆಗೆ, ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಜತೆಗೆ ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರವೂ ಆಗಲಿದೆ. ಈ ನಿಟ್ಟಿನಲ್ಲಿ ನಾವು ಹೆಜ್ಜೆ  ಇಡಲಿದ್ದೇವೆ’ ಎಂದು ಪ್ರಧಾನಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದರು.

ಅಂದ ಹಾಗೆ ಗಂಗಾ ನದಿಯ ಡಾಲ್ಫಿನ್‌ಗಳನ್ನು 2010ರಲ್ಲಿ ’ರಾಷ್ಟ್ರೀಯ ಜಲಚರ ಪ್ರಾಣಿಗಳು’ ಎಂದು ಘೋಷಿಸಲಾಗಿತ್ತು. ಭಾರತ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಹರಿಯುವ ಗಂಗಾ ಮತ್ತು ಬ್ರಹ್ಮಪುತ್ರ ಉಪ ನದಿಗಳಲ್ಲಿ ಈ ಡಾಲ್ಫಿನ್‌ಗಳು ಇವೆ. ಭಾರತದಲ್ಲಿ ಅಸ್ಸಾಂ, ಬಿಹಾರ್, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಳದ ನದಿ, ಸಮುದ್ರಗಳಲ್ಲಿ ಡಾಲ್ಫಿನ್‌ಗಳು ಕಾಣುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು