ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಹೇಡಿಗಳು: ರಾಹುಲ್‌ ಗಾಂಧಿ

Last Updated 10 ಮಾರ್ಚ್ 2022, 10:13 IST
ಅಕ್ಷರ ಗಾತ್ರ

ಮಲಪ್ಪುರಂ: 'ಶಾಲೆಯಲ್ಲಿ ನಿಮಗಿಂತ ಎತ್ತರವಾಗಿರುವವನು ನಿಮ್ಮನ್ನು ಭಯ ಪಡಿಸಲು ಪ್ರಯತ್ನಿಸಿರಬಹುದು. ನೀವು ಹೆದರಿಕೊಂಡಿರುವ ವರೆಗೂ ನಿಮ್ಮನ್ನು ಭಯ ಪಡಿಸುತ್ತಾನೆ. ನೀವು ಧೈರ್ಯದಿಂದ ಎದುರು ನಿಂತಾಗ ಆತನೇ ಭಯಗೊಳ್ಳುತ್ತಾನೆ' ಎಂಬ ಉದಾಹರಣೆಯನ್ನು ಕೊಟ್ಟ ರಾಹುಲ್‌ ಗಾಂಧಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

'ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ಮಂದಿಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಅವರು ಹೇಡಿಗಳು. ನಾನು ಅವರನ್ನು ಎದುರಿಸಿದ್ದೇನೆ. ಮುಂದೆಯೂ ಅವರನ್ನು ಎದುರಿಸುತ್ತೇನೆ. ಅವರು ಸ್ವತಃ ಭಯ ಬಿದ್ದಿದ್ದಾರೆ. ಹಾಗಾಗಿ ಅವರು ನಿಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ' ಎಂದರು.

ಕೇರಳ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಮಲಪ್ಪುರಂನ ಎರ್ನಾಡ್‌ನಲ್ಲಿರುವ 'ಸುಲ್ಲಮುಸ್ಸಲಮ್‌ ಆರ್ಟ್ಸ್‌ ಆ್ಯಂಡ್‌ ಸೈನ್ಸ್‌ ಕಾಲೇಜ್‌'ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕಾಂಗ್ರೆಸ್‌ ಸರಣಿ ಟ್ವೀಟ್‌ ಮೂಲಕ ಹಂಚಿಕೊಂಡಿದೆ.

'ಭಯ ಒಂದು ಆಯ್ಕೆ. ಯಾವುದಕ್ಕಾದರೂ ಭಯಗೊಂಡರೆ, ನಾವು ಭಯ ಪಡುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರ್ಥ. ನಾವು ಭೀತಿಗೆ ಒಳಗಾಗುವುದನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತೇವೆ. ಆದರೆ ಮತ್ತೊಂದು ಆಯ್ಕೆಯೂ ಇದೆ. ನೀವು ತಿರುಗಿ ಬೀಳಬಹುದು ಮತ್ತು ಹೆದರಿಕೊಂಡಿಲ್ಲ ಎಂದು ಹೇಳಬಹುದು' ಎಂದು ರಾಹುಲ್‌ ಹೇಳಿದರು.

ಕೇವಲ ನಾನೊಬ್ಬನೇ ನಿಮ್ಮ ಭರವಸೆಯಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರವರೇ ಭರವಸೆಯಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬರೂ ನನ್ನ ಭರವಸೆ. ನೀವು ತಿರುಗಿ ನಿಂತು ಭಯಗೊಂಡಿಲ್ಲ ಎಂದು ಹೇಳಿದರೆ ರಾಷ್ಟ್ರವು ಉತ್ತಮವಾಗಿರಲಿದೆ. ನೀವು ಯಾವುದಕ್ಕೂ ಭಯಪಡಬೇಕಾಗಿಲ್ಲ' ಎಂದರು.

ಐದು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್‌ ಅಧಿಕಾರದಿಂದ ಹೊರಗುಳಿಯುವುದು ಖಚಿತವಾಗಿದೆ. ಉತ್ತರ ಪ್ರದೇಶದಲ್ಲಿ ನೀರಸವಾದ ಪ್ರದರ್ಶನ ತೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT