ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇರ್ತಲದಿಂದ ಶುರುವಾದ 13ನೇ ದಿನದ ‘ಭಾರತ್‌ ಜೋಡೊ’ ಯಾತ್ರೆ

Last Updated 20 ಸೆಪ್ಟೆಂಬರ್ 2022, 14:15 IST
ಅಕ್ಷರ ಗಾತ್ರ

ಆಲಪ್ಪುಳ (ಪಿಟಿಐ):ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ‘ಭಾರತ್ ಜೋಡೊ’ 13ನೇ ದಿನದ ಯಾತ್ರೆಯನ್ನುಮಂಗಳವಾರಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಚೇರ್ತಲದಿಂದ ಪ್ರಾರಂಭಿಸಿದರು.

ಸೇಂಟ್‌ ಮೈಕೆಲ್‌ ಕಾಲೇಜಿನ ಆವರಣದಲ್ಲಿ ರಂಬೂಟನ್‌ ಸಸಿಗಳನ್ನು ನೆಡುವ ಮೂಲಕ ಯಾತ್ರೆ ಆರಂಭಿಸಲಾಯಿತು. ಸಸಿ ನೆಡುವ ಕಾರ್ಯಕ್ರಮವನ್ನು ಪಕ್ಷದ ಕೇರಳ ಘಟಕದ ಪರಿಸರ ವಿಭಾಗ ಶಸ್ತ್ರವೇದಿ ಆಯೋಜಿಸಿತ್ತು. ಬೆಳಿಗ್ಗೆ ಅವಧಿಯ 15 ಕಿ.ಮೀ. ಪಾದಯಾತ್ರೆಕುಥಿಯಾಥೋಡುನಲ್ಲಿ ಕೊನೆಯಾಯಿತು. ಕೇರಳದಲ್ಲಿ ಇನ್ನು 12 ದಿನಗಳಲ್ಲಿ 255 ಕಿ.ಮೀ. ಯಾತ್ರೆ ನಡೆಯಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ತಿಳಿಸಿದರು.

ಯಾತ್ರೆಯಲ್ಲಿರಾಹುಲ್‌ ಅವರಿಗೆಕೇರಳ ಕಾಂಗ್ರೆಸ್‌ ನಾಯಕರಾದ ಕೆ. ಮುರಳೀಧರನ್‌, ಪವನ್‌ ಖೇರಾ, ವಿ.ಡಿ. ಸತೀಶನ್‌, ಶನಿಮೋಲ್‌ ಉಸ್ಮಾನ್‌ ಸಾಥ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT