ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video| ಜಮ್ಮು–ಕಾಶ್ಮೀರದಲ್ಲಿ ಸ್ನೋ ಸ್ಕೂಟರ್ ಸವಾರಿ ಮಾಡಿದ ರಾಹುಲ್‌ – ಪ್ರಿಯಾಂಕಾ

Last Updated 20 ಫೆಬ್ರವರಿ 2023, 8:40 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ ಸ್ಕೀ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ನೋ ಸ್ಕೂಟರ್‌ ಸವಾರಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ.

ಅಣ್ಣ–ತಂಗಿ ಇಬ್ಬರೂ ಹಿಮ ಸ್ಕೂಟರ್‌ ಅನ್ನು ಒಬ್ಬರಾದ ಮೇಲೆ ಒಬ್ಬರು ಚಲಾಯಿಸುತ್ತಿರುವುದು, ಸಂಭ್ರಮದಿಂದಿರುವುದು ವಿಡಿಯೊದಲ್ಲಿದೆ.

101 ಸೆಕೆಂಡಗಳ ವಿಡಿಯೊವನ್ನು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಹೆಚ್ಚಿನ ವೀಕ್ಷಕರು ಒಡಹುಟ್ಟಿದವರ ಈ ವಿಡಿಯೊಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಅಪಹಾಸ್ಯವನ್ನೂ ಮಾಡಿದ್ದಾರೆ.

ರಾಹುಲ್‌–ಪ್ರಿಯಾಂಕಾ ಸ್ನೋ ಸ್ಕೂಟರ್‌ ಸವಾರಿಯ ವಿಡಿಯೊವನ್ನು ರಾಜಸ್ಥಾನದ ಯುವ ಕಾಂಗ್ರೆಸ್ ಮುಖಂಡರೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು (@Vijay_NT2) ‘ಈ ರೀತಿಯ ವಿಡಿಯೊಗಳನ್ನು ಹಂಚಿಕೊಂಡರೆ ಯಾರಾದರೂ ನಿಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ?’ ಎಂದು ಪ್ರಶ್ನೆ ಮಾಡಿದ್ದಾರೆ.

ಖಾಸಗಿ ಭೇಟಿಗಾಗಿ ರಾಹುಲ್ ಕಳೆದ ವಾರ ಇಲ್ಲಿಗೆ ಆಗಮಿಸಿದ್ದು, ಗುಲ್ಮಾರ್ಗ್‌ನಲ್ಲಿ ಬೀಡು ಬಿಟ್ಟಿದ್ದಾರೆ. ವಾರಾಂತ್ಯದಲ್ಲಿ ಅವರ ಸಹೋದರಿಯೂ ಅವರೊಂದಿಗೆ ಕೂಡಿಕೊಂಡಿದ್ದಾರೆ.

'ಭಾರತ್ ಜೋಡೋ ಯಾತ್ರೆ'ಯ ಕೊನೆಯ ಎರಡು ದಿನಗಳಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಾಶ್ಮೀರದಲ್ಲೇ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT