ನವದೆಹಲಿ: ರಾಜಸ್ಥಾನದ ರಾಮಗಡವಿಸ್ಧಾರ್ ಅಭಯಾರಣ್ಯವನ್ನು ಭಾರತದ 52 ನೇ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವನ್ನಾಗಿ ಘೋಷಣೆ ಮಾಡಲಾಗಿದೆ.

ಸೋಮವಾರ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಘೋಷಣೆ ಮಾಡಿದ್ದಾರೆ.ರಾಜಸ್ಥಾನದಲ್ಲಿನ ರಣತಂಬೂರ್, ಸಾರಿಸ್ಕಾ ಹಾಗೂ ಮುಕುಂಧರಾ ಹುಲಿ ಸಂರಕ್ಷಿತಾರಣ್ಯದ ನಂತರ ರಾಮಗಡವಿಸ್ಧಾರ್ ಹುಲಿ ಸಂರಕ್ಷಿತಾರಣ್ಯ ನಾಲ್ಕನೇಯದಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವನ್ಯಜೀವಿಗಳನ್ನು, ಪರಿಸರವನ್ನು ಹಾಗೂ ವನ್ಯಸಂಪತ್ತನ್ನು ಉಳಿಸಲು ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿರಾಮಗಡವಿಸ್ಧಾರ್ ಹುಲಿ ಸಂರಕ್ಷಿತಾರಣ್ಯ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.

ರಾಮಗಡವಿಸ್ಧಾರ್ ಹುಲಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ರಾಷ್ಟ್ರಿಯ ಹುಲಿ ಸಂರಕ್ಷಣಾ ಪ್ರಾಧಿಕಾರಕಳೆದ ವರ್ಷ ಜುಲೈ 5 ರಂದು ತಾತ್ವಿಕ ಒಪ್ಪಿಗೆ ಸೂಚಿಸಿತ್ತು.

ಈ ನಿರ್ಧಾರದಿಂದ ಭೀಮ್ಲಾತ್ ಹಾಗೂ ರಾಮಗಡವಿಭಾಗದಲ್ಲಿ ಪರಿಸರ ಪ್ರವಾಸೋಧ್ಯಮ ಉತ್ತೇಜನಗೊಳ್ಳಲಿದೆ ಎಂದುಭೂಪೇಂದ್ರ ಯಾದವ್ ತಿಳಿಸಿದ್ದಾರೆ.2019 ರ ಹುಲಿ ಗಣತಿ ವರದಿ ಪ್ರಕಾರ ಭಾರತದಲ್ಲಿ 2,967 ಹುಲಿಗಳು ಇರುವುದು ಕಂಡು ಬಂದಿದೆ.

ಮದುವೆಯಲ್ಲಿದ್ದ ನ್ಯಾಯಮೂರ್ತಿ: ವಾಟ್ಸ್ಆ್ಯಪ್ನಲ್ಲೇ ನಡೆಯಿತು ತುರ್ತು ವಿಚಾರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.