ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಉ.ಪ್ರ ಮಾಜಿ ಸಚಿವ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ

Last Updated 12 ನವೆಂಬರ್ 2021, 14:52 IST
ಅಕ್ಷರ ಗಾತ್ರ

ಲಖನೌ: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರೆ ಇಬ್ಬರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ, ಅಶೋಕ್ ತಿವಾರಿ ಮತ್ತು ಆಶಿಶ್‌ ಶುಕ್ಲಾ ಅವರಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ ₹2 ಲಕ್ಷ ದಂಡ ವಿಧಿಸಲಾಗಿದೆ. ತೀರ್ಪು ನೀಡುವಾಗ ಎಲ್ಲ ಮೂವರೂ ನ್ಯಾಯಾಲಯದಲ್ಲಿ ಹಾಜರಿದ್ದರು.

ಉತ್ತರ ಪ್ರದೇಶದ ಹಿಂದಿನ ಅಖಿಲೇಶ್ ಯಾದವ್‌ ಸರ್ಕಾರದಲ್ಲಿ ಪ್ರಜಾಪತಿ ಸಚಿವರಾಗಿದ್ದರು. ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಕೆ.ರಾಯ್‌, ಬುಧವಾರ ಮೂವರನ್ನೂ ದೋಷಿಗಳು ಎಂದು ತೀರ್ಪು ನೀಡಿದ್ದರು. ಆದರೆ, ಸಾಕ್ಷ್ಯಾಧಾರ ಕೊರತೆಯ ಕಾರಣದಿಂದಾಗಿ ಆರೋಪಿಗಳಾದ ವಿಕಾಸ್‌ ವರ್ಮಾ, ರೂಪೇಶ್ವರ್‌, ಅಮರೇಂದ್ರ ಸಿಂಗ್‌ ಅಲಿಯಾಸ್‌ ಪಿಂಟು ಹಾಗೂ ಚಂದ್ರಪಾಲ್‌ ಅವರನ್ನು ಕೋರ್ಟ್‌ ಖುಲಾಸೆ ಗೊಳಿಸಿದೆ.

ಅಖಿಲೇಶ್‌ ಯಾದವ್‌ ಸಂಪುಟದಲ್ಲಿ ಪ್ರಜಾಪತಿ ಸಾರಿಗೆ ಮತ್ತು ಗಣಿಗಾರಿಕೆ ಖಾತೆ ನಿರ್ವಹಿಸಿದ್ದರು. ಅವರನ್ನು 2017ರ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.

ಸಚಿವರಾಗಿದ್ದ ಪ್ರಜಾಪತಿ ಅವರ ವಿರುದ್ಧ ಗೌತಮ್‌ಪಲ್ಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ನೀಡಿದ ದೂರಿಗೆ ಪೊಲೀಸರು ಯಾವುದೇ ಕ್ರಮಕೈಗೊಳ್ಳದಿರುವುದನ್ನು ಪ್ರಶ್ನಿಸಿ ಸಂತ್ರಸ್ತ ಮಹಿಳೆಯು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಎಫ್ಐಆರ್ ದಾಖಲಿಸಲಾಗಿತ್ತು. ಅನಂತರದಿಂದ ಪ್ರಜಾಪತಿ ಜೈಲು ವಾಸದಲ್ಲಿದ್ದಾರೆ.

2014ರ ಅಕ್ಟೋಬರ್‌ನಿಂದ ಪ್ರಜಾಪತಿ ಮತ್ತು ಅವರ ಜೊತೆಗಾರರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಆಕೆಯ ಮಗಳ ಮೇಲೆ 2016ರ ಜುಲೈನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ನಂತರದಲ್ಲಿ ಸಂತ್ರಸ್ತ ಮಹಿಳೆಯು ದೂರು ನೀಡಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT