ಶ್ರೀನಗರ: ಕಾಶ್ಮೀರದ ಅತಿ ಎತ್ತರದ ಬಾಲ್‌ಟಾಲ್–ಝೋಜಿಲಾ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಿಮ ಚಿರತೆ ಪತ್ತೆಯಾಗಿದೆ.

ಪರಿಸರ ಸಂರಕ್ಷಣಾ ಫೌಂಡೇಷನ್‌ನ (ಭಾರತ) ಸಂಶೋಧಕರು ಜಮ್ಮು ಮತ್ತು ಕಾಶ್ಮೀರದ ವನ್ಯಜೀವಿ ರಕ್ಷಣಾ ಇಲಾಖೆಯ ಸಹಯೋಗದೊಂದಿಗೆ ಕಣಿವೆ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಕೈಗೊಂಡಿದ್ದು, ಹೀಗೆ ಅಳವಡಿಸಲಾಗಿರುವ ಕ್ಯಾಮೆರಾವೊಂದರಲ್ಲಿ ಹಿಮ ಚಿರತೆಯ ದೃಶ್ಯ ಸೆರೆಯಾಗಿದೆ.

ಭಾರತದಲ್ಲಿ ಹಿಮ ಚಿರತೆಗಳ ಇರುವಿಕೆ ಹಾಗೂ ಅವುಗಳ ಸಂಖ್ಯೆಯನ್ನು ಪತ್ತೆ ಹಚ್ಚುವುದಕ್ಕಾಗಿ ಹಿಮ ಚಿರತೆಗಳ ಜನಸಂಖ್ಯೆ ಮೌಲ್ಯಮಾಪನ (ಎಸ್‌ಪಿಎಐ) ಯೋಜನೆ ಕೈಗೊಳ್ಳಲಾಗಿದೆ. ಇದಕ್ಕೆ ಕೇಂದ್ರ ಪರಿಸರ ಸಚಿವಾಲಯವು ಹಣಕಾಸಿನ ನೆರವು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.