ಮಂಗಳವಾರ, ಮೇ 24, 2022
30 °C

ವಿ.ಕೆ.ಶಶಿಕಲಾ ಪದಚ್ಯುತಿ: ಎಐಎಡಿಎಂಕೆ ನಿರ್ಣಯ ಎತ್ತಿ ಹಿಡಿದ ಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿ.ಕೆ.ಶಶಿಕಲಾ ಅವರನ್ನು ಪದಚ್ಯುತಗೊಳಿಸಿ ಪಕ್ಷವು 2017ರ ಸೆಪ್ಟೆಂಬರ್‌ನಲ್ಲಿ ಕೈಗೊಂಡಿದ್ದ ನಿರ್ಣಯವನ್ನು ಕೆಳಹಂತದ ನ್ಯಾಯಾಲಯ ಸೋಮವಾರ ಎತ್ತಿಹಿಡಿದಿದೆ.

ಈ ನಿರ್ಣಯವನ್ನು ಪ್ರಶ್ನಿಸಿ ಶಶಿಕಲಾ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್‌ 4ರ ಹೆಚ್ಚುವರಿ ನ್ಯಾಯಾಧೀಶರಾದ ಜೆ.ಶ್ರೀದೇವಿ ವಜಾ ಮಾಡಿದರು. ಅಲ್ಲದೆ, ಎಐಎಡಿಎಂಕೆ ಸಂಯೋಜಕರಾಗಿ ಒ.ಪನ್ನೀರ್‌ಸೆಲ್ವಂ, ಜಂಟಿ ಸಂಯೋಜಕರಾಗಿ ಕೆ.ಪಳನಿಸ್ವಾಮಿ ಅವರನ್ನು ನೇಮಿಸಿ ಕೈಗೊಂಡಿದ್ದ ನಿರ್ಣಯವನ್ನು ಕೋರ್ಟ್‌ ಮಾನ್ಯ ಮಾಡಿದೆ. 

2017ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಕ್ಷದ ಸಾಮಾನ್ಯ ಸಭೆಯು ಶಶಿಕಲಾ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಪದಚ್ಯುತಗೊಳಿಸಿತ್ತು. ಜೆ.ಜಯಲಲಿತಾ ಅವರೇ ಪಕ್ಷದ ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಿತ್ತು. ಅಲ್ಲದೆ, ಪ್ರಧಾನ ಕಾರ್ಯದರ್ಶಿ ಸ್ಥಾನದ ಅಧಿಕಾರವನ್ನು ಪನ್ನೀರ್‌ಸೆಲ್ವಂ, ಪಳನಿಸ್ವಾಮಿ ಅವರಿದ್ದ ಚಾಲನಾ ಸಮಿತಿಗೆ ನೀಡಿ ನಿರ್ಣಯವನ್ನು ಕೈಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು