ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಯಿಂದ ₹100 ಕೋಟಿ ದಾಖಲೆಯಿಲ್ಲದ ಆದಾಯ ಪತ್ತೆ

Last Updated 22 ನವೆಂಬರ್ 2022, 15:20 IST
ಅಕ್ಷರ ಗಾತ್ರ

ನವದೆಹಲಿ: ರಿಯಲ್‌ ಎಸ್ಟೇಟ್‌ ಮತ್ತು ವಜ್ರದ ವ್ಯಾಪಾರದಲ್ಲಿ ತೊಡಗಿದ್ದ ಬಿಹಾರ ಮೂಲದ ಪ್ರತ್ಯೇಕ ಉದ್ಯಮ ಸಮೂಹಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು (ಐಟಿ), ದಾಖಲೆಯಿಲ್ಲದ ₹100 ಕೋಟಿ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಂಗಳವಾರ ತಿಳಿಸಿದೆ.

ಬಿಹಾರದ ಪಟ್ನಾ, ಭಗಲ್‌ಪುರ್‌, ದೆರ್ಹಿ–ಆನ್‌–ಸೋನ್‌, ಉತ್ತರ ಪ್ರದೇಶದ ಲಖನೌ ಮತ್ತು ದೆಹಲಿಯ ಸುಮಾರು 30 ಸ್ಥಳಗಳಲ್ಲಿ ನವೆಂಬರ್‌ 17ರಂದು ಶೋಧ ಕಾರ್ಯಾಚರಣೆ ಜಾರಿ ಮಾಡಲಾಯಿತು.ದಾಳಿ ವೇಳೆ, ₹5 ಕೋಟಿ ಮೌಲ್ಯದ ದಾಖಲೆ ಇಲ್ಲದ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 14 ಬ್ಯಾಂಕ್‌ ಲಾಕರ್‌ಗಳನ್ನು ಜಪ್ತಿ ಮಾಡಲಾಗಿದೆ.

ಚಿನ್ನ ಮತ್ತು ವಜ್ರಾಭರಣ ವ್ಯಪಾರ ಸಮೂಹವು ₹12 ಕೋಟಿ ದಾಖಲೆಯಿಲ್ಲದ ಆದಾಯವನ್ನು ಚಿನ್ನ ಕೊಳ್ಳಲು ಮತ್ತು ಮಳಿಗೆಗಳ ದುರಸ್ತಿಗಾಗಿ ಇರಿಸಿದೆ ಎಂದು ತನ್ನ ಲೆಕ್ಕಪತ್ರದಲ್ಲಿ ದಾಖಲಿಸಿದೆ. ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿದ ವೇಳೆ ₹12 ಕೋಟಿಗೂ ಹೆಚ್ಚು ದಾಖಲೆಯಿಲ್ಲದ ಆದಾಯ ಪತ್ತೆಯಾಗಿದೆ ಎಂದುಸಿಬಿಡಿಟಿ ತಿಳಿಸಿದೆ.

ರಿಯಲ್‌ ಎಸ್ಟೇಟ್‌ ವ್ಯವಹಾರದ ಸಮೂಹವು ಭೂಮಿ ಖರೀದಿ, ಕಟ್ಟಡಗಳ ನಿರ್ಮಾಣ, ಅಪಾರ್ಟ್‌ಮೆಂಟ್‌ಗಳ ಮಾರಾಟದಲ್ಲಿ ನಡೆಸಿರುವ ನಗದು ವ್ಯವಹಾರಕ್ಕೆದಾಖಲೆಯಿಲ್ಲ ಎಂದು ತಿಳಿದುಬಂದಿದೆ. ಈ ರೀತಿಯ ದಾಖಲೆಯಿಲ್ಲದೇ ₹80 ಕೋಟಿಗೂ ಹೆಚ್ಚು ನಗದು ವ್ಯವಹಾರ ನಡೆದಿದೆ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT