ಭಾನುವಾರ, ಸೆಪ್ಟೆಂಬರ್ 26, 2021
23 °C

ಅಲೋಪತಿ ಹೇಳಿಕೆ: ಮೂಲ ದಾಖಲೆ ಸಲ್ಲಿಸಲು ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಸಮಯದಲ್ಲಿ ಅಲೋಪತಿ ಔಷಧದ ಬಳಕೆ ಕುರಿತು ನೀಡಿರುವ ಹೇಳಿಕೆಯ ಮೂಲ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಯೋಗಗುರು ಬಾಬಾ ರಾಮದೇವ್‌ಗೆ ಸುಪ್ರೀಂ ಕೋರ್ಟ್‌ ತಿಳಿಸಿದೆ. 

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ಎನ್‌.ವಿ.ರಮಣ ಅವರನ್ನೊಳಗೊಂಡ ಪೀಠ, ‘ಅಲೋಪತಿ ಔಷಧ ಕುರಿತು ಅವರು ನೀಡಿರುವ ಮೂಲ ಹೇಳಿಕೆ ಯಾವುದು ? ನೀವು ಪೂರ್ಣ ಹೇಳಿಕೆ ಮತ್ತು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿಲ್ಲ‘ ಎಂದು ರಾಮ್‌ದೇವ್‌ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರಿಗೆ ಹೇಳಿದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ ವಿಡಿಯೊದ ದೃಶ್ಯಗಳು ಮತ್ತು ಅದರಲ್ಲಿನ ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸುವುದಾಗಿ ನ್ಯಾಯಾಧೀಶರಾದ ಎ ಎಸ್ ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠದ ಎದುರು ತಿಳಿಸಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.

ಅಲೋಪತಿ ಔಷಧದ ಕುರಿತು ರಾಮ್‌ದೇವ್‌ ನೀಡಿದ ಹೇಳಿಕೆ ವಿರೋಧಿಸಿ, ಅವರ ವಿರುದ್ಧ ಛತ್ತೀಸ್‌ಗಡ ಮತ್ತು ಬಿಹಾರ ರಾಜ್ಯದ ಭಾರತೀಯ ವೈದ್ಯಕೀಯ ಸಂಘ ದೂರು ನೀಡಿತ್ತು. ಈ ಸಂಬಂಧ ರಾಮ್‌ದೇವ್‌ ವಿರುದ್ಧ ಹಲವು ಎಫ್‌ಐಆರ್‌ ಗಳು ದಾಖಲಾಗಿವೆ. ಎಫ್‌ಐಆರ್‌ಗಳಿಗೆ ತಡೆ ನೀಡುವಂತೆ ಕೋರಿ ರಾಮ್‌ದೇವ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿತು.

ಇದನ್ನೂ ಓದಿ... ಉತ್ತರ ಪ್ರದೇಶದಲ್ಲಿ 2022ರಲ್ಲಿ ಪ್ರಜಾಪ್ರಭುತ್ವ ಕ್ರಾಂತಿ: ಅಖಿಲೇಶ್ ಯಾದವ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು