ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಹೆಚ್ಚುವರಿ ಅವಕಾಶ ನಿರಾಕರಿಸಿದ ಸುಪ್ರೀಂಕೋರ್ಟ್

Last Updated 24 ಫೆಬ್ರುವರಿ 2021, 10:19 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷ ಕೊರೊನಾ ಸಂಕಷ್ಟದ ಕಾಲದಲ್ಲಿ ತಮ್ಮ ಕೊನೆಯ ಅವಕಾಶ ಕಳೆದುಕೊಂಡ ಯುಪಿಎಸ್ ಸಿ ಆಕಾಂಕ್ಷಿತರು ಮತ್ತೊಂದು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.

ಅಕ್ಟೋಬರ್ 2020ರ ಯುಪಿಎಸ್ ಸಿ ಪರೀಕ್ಷೆಗೆ ಕೊರೊನಾದಿಂದ ತಯಾರಿ ಮಾಡಿಕೊಳ್ಳಲು ಸಾಧ್ಯವಾಗದೆ ಕೊನೆಯ ಅವಕಾಶ ಕಳೆದುಕೊಂಡವರಿಗೆ ಹೆಚ್ಚುವರಿ ಅವಕಾಶ ಕೊಡುವಂತೆ ಕೋರಿ ಯುಪಿಎಸ್ ಸಿ ನಾಗರಿಕ ಸೇವಾ ಆಕಾಂಕ್ಷಿ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡುತ್ತಿರುವುದಾಗಿ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ.

ಕೊರೊನಾದಿಂದ 2020ರಲ್ಲಿ ಕಡೆಯ ಅವಕಾಶ ಕಳೆದುಕೊಂಡವರು ಸೇರಿ ಯುಪಿಎಸ್ ಸಿ ಆಕಾಂಕ್ಷಿತರಿಗೆ ವಯೋಮಿತಿಯಲ್ಲಿ ಒಂದು ಬಾರಿ ವಿನಾಯಿತಿ ಕೊಡುವುದು ಬೇರೆ ಅಭ್ಯರ್ಥಿಗಳಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ಫೆಬ್ರುವರಿ 9 ರಂದು ಕೇಂದ್ರಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು.

2020 ರ ಅಕ್ಟೋಬರ್‌ನಲ್ಲಿ ತಮ್ಮ ಕೊನೆಯ ಪ್ರಯತ್ನದ ಅವಕಾಶ ಕಳೆದುಕೊಂಡ ವಯೋಮಿತಿ‌ ಮೀರದ ಅಭ್ಯರ್ಥಿಗಳಿಗೆ ಈ ವರ್ಷ ಇನ್ನೂ ಒಂದು ಅವಕಾಶ ಸಿಗುತ್ತದೆ ಎಂದುಕೇಂದ್ರ ಸರ್ಕಾರ ಹೇಳಿದೆ.

ಹೆಚ್ಚುವರಿ ಅವಕಾಶವನ್ನು ನೀಡಲು ಆರಂಭದಲ್ಲಿ ಕೇಂದ್ರವು ಸಿದ್ಧವಿರಲಿಲ್ಲ. ನಂತರ ನ್ಯಾಯಪೀಠದ ಸಲಹೆಯ ಮೇರೆಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT