ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2ನೇ ಬೂಸ್ಟರ್‌ ಡೋಸ್‌ ಅನವಶ್ಯಕ’

Last Updated 3 ಜನವರಿ 2023, 15:41 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಎರಡನೇ ಬೂಸ್ಟರ್‌ ಡೋಸ್‌ ಲಸಿಕೆ ನೀಡುವುದು ಸರ್ಕಾರದ ಸದ್ಯದ ಆದ್ಯತೆ ಅಲ್ಲ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ದೇಶದಲ್ಲಿ ಹಲವಾರು ಜನರು ಇನ್ನೂ ಮೂರನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ. ಹೀಗಿರುವಾಗ ನಾಲ್ಕನೇ ಡೋಸ್‌ (ಎರಡನೇ ಬೂಸ್ಟರ್‌ ಡೋಸ್) ಲಸಿಕೆ ಅನವಶ್ಯಕ. 2ನೇ ಬೂಸ್ಟರ್‌ ಡೋಸ್ ಉಪಯೋಗದ ಕುರಿತ ನಿಖರ ಅಂಕಿಅಂಶ ಸಹ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಭಾರತದಲ್ಲಿ 2022ರ ಜನವರಿಯಿಂದ ಮುನ್ನೆಚ್ಚರಿಕಾ ಅಥವಾ ಬೂಸ್ಟರ್‌ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗುತ್ತಿದ್ದು, ಈವರೆಗೆ ಶೇ 28ರಷ್ಟು ಅರ್ಹ ಜನತೆ ಲಸಿಕೆ ಪಡೆದಿದ್ದಾರೆ.

ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನಾಲ್ಕನೇ ಡೋಸ್‌ ಲಸಿಕೆ ನೀಡುವಂತೆ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಪ್ರತಿನಿಧಿಗಳು ಮತ್ತು ಹಿರಿಯ ವೈದ್ಯರು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರನ್ನು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT