ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಂಸತ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಎರಡನೇ ಎಫ್‌ಐಆರ್ ದಾಖಲು

Last Updated 3 ಜನವರಿ 2022, 11:13 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್‌ ದಾಖಲಾಗಿದೆ.

ನದೀಮ್‌ ಅಲಿ ಎಂಬುವವರು ನೀಡಿರುವ ದೂರಿನ ಮೇರೆಗೆ ಧರ್ಮ ಸಂಸತ್‌ ಕಾರ್ಯಕ್ರಮ ಆಯೋಜಕರಾದ ಯತಿ ನರಸಿಂಹಾನಂದ ಗಿರಿ, ವಾಸಿಂ ರಿಜ್ವಿ (ಜಿತೇಂದ್ರ ನಾರಾಯಣ ತ್ಯಾಗಿ), ಸಿಂಧು ಸಾಗರ್‌, ಧರ್ಮದಾಸ್‌, ಪರಮಾನಂದ, ಸಾಧ್ವಿ ಅನ್ನಪೂರ್ಣ, ಆನಂದ ಸ್ವರೂಪ, ಅಶ್ವಿನಿ ಉಪಾಧ್ಯಾಯ, ಸುರೇಶ್‌ ಚೌಹಾಣ್‌ ಮತ್ತು ಪ್ರಬೋಧಾನಂದ ಗಿರಿ ವಿರುದ್ಧ ಹರಿದ್ವಾರದ ಜ್ವಾಲಾಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಎಫ್‌ಐಆರ್‌ ದಾಖಲಾಗಿರುವ ಹರಿದ್ವಾರ ನಗರ ಪೊಲೀಸ್‌ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಭಾನುವಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು.

ಡಿಸೆಂಬರ್‌ 16ರಿಂದ 19ರವರೆಗೆ ನಡೆದಿದ್ದ ಧರ್ಮ ಸಂಸತ್‌ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಸ್ಲಿಮರು ಡೆಹ್ರಾಡೂನ್‌ ಮತ್ತು ಹರಿದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT