ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಭ್ರೂಣ ಹತ್ಯೆ: 2030ರ ವೇಳೆಗೆ 68 ಲಕ್ಷ ಕಡಿಮೆ ಹೆಣ್ಣುಮಕ್ಕಳ ಜನನ ಸಾಧ್ಯತೆ

ಸೌದಿ ಅರೇಬಿಯಾ, ಪ್ಯಾರಿಸ್‌ ಸಂಶೋಧಕರಿಂದ ಅಧ್ಯಯನ
Last Updated 31 ಆಗಸ್ಟ್ 2020, 14:11 IST
ಅಕ್ಷರ ಗಾತ್ರ

ನವದೆಹಲಿ: ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ಹೆಚ್ಚಾಗುವ ಪರಿಣಾಮ ಭಾರತದಲ್ಲಿ 2030ರ ವೇಳೆಗೆ ಜನಿಸಲಿರುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ 68 ಲಕ್ಷದಷ್ಟು ಕಡಿಮೆಯಾಗಲಿದೆ ಎಂದು ಅಧ್ಯಯನವೊಂದು ಅಂದಾಜಿಸಿದೆ.

ಸೌದಿ ಅರೇಬಿಯಾದ ಕಿಂಗ್‌ ಅಬ್ದುಲ್ಲಾ ಯೂನಿವರ್ಸಿಟಿ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ (ಕೆಎಯುಎಸ್‌ಟಿ) ಹಾಗೂ ಫ್ರಾನ್ಸ್‌ ಮೂಲದ ಯೂನಿವರ್ಸಿಟಿ ಆಫ್‌ ಪ್ಯಾರಿಸ್‌ನ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನ ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದಾಗ ಉತ್ತರ ಪ್ರದೇಶದಲ್ಲಿಯೇ ಹೆಣ್ಣುಭ್ರೂಣ ಹತ್ಯೆ ಪ್ರಮಾಣ ಹೆಚ್ಚಿರಲಿರುವ ಕಾರಣ, ಜನಿಸುವ ಹೆಣ್ಣುಮಕ್ಕಳ ಸಂಖ್ಯೆ ಅಧಿಕವಾಗಿರಲಿದೆ ಎಂದೂ ಅಧ್ಯಯನ ಹೇಳಿದೆ.

ಜನನ ಸಂದರ್ಭದಲ್ಲಿನ ಲಿಂಗಾನುಪಾತದಲ್ಲಿ (ಎಸ್‌ಆರ್‌ಬಿ) 1970ರಿಂದ ಭಾರಿ ಅಸಮತೋಲನ ಕಂಡುಬಂದಿದೆ. ಗಂಡು ಮಗುವಿಗೆ ಹೆಚ್ಚು ಪ್ರಾಮುಖ್ಯ ಹಾಗೂ ಜನನಪೂರ್ವ ಲಿಂಗ ಪತ್ತೆ ಹಚ್ಚುವ ತಂತ್ರಜ್ಞಾನ ಹೆಚ್ಚು ಪ್ರಚಲಿತಗೊಂಡಿದ್ದು ಈ ಅಸಮತೋಲನಕ್ಕೆ ಕಾರಣ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

ಇತರ ದೇಶಗಳಲ್ಲಿಯೂ ಇಂತಹ ಅಸಮತೋಲನವನ್ನು ಕಾಣಬಹುದು. ಆದರೆ, ಪ್ರಾದೇಶಿಕ ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯ ಹೊಂದಿರುವ ಭಾರತದಲ್ಲಿ ಮಾತ್ರ ಈ ಅಸಮತೋಲನ ಭಿನ್ನವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಧ್ಯಯನ ನಡೆಸಿರುವ ರಾಜ್ಯಗಳ ಪೈಕಿ 17 ರಾಜ್ಯಗಳಲ್ಲಿನ ಜನರ ಆದ್ಯತೆ ಗಂಡು ಮಗು ಎಂಬುದು ಕಂಡು ಬಂದಿದೆ. ಈ ಮನೋಭಾವ ವಾಯವ್ಯ ರಾಜ್ಯಗಳಲ್ಲಿನ ಜನರಲ್ಲಿ ಹೆಚ್ಚು ಎಂದೂ ಅಧ್ಯಯನ ತಿಳಿಸಿದೆ.

ಪ್ರಸವಪೂರ್ವ ಲಿಂಗ ಪತ್ತೆ ಹಾಗೂ ನಿರ್ದಿಷ್ಟ ಭ್ರೂಣದ ಹತ್ಯೆಯನ್ನು ನಿಷೇಧಿಸುವ ‘ಲಿಂಗ ನಿರ್ಧಾರ ತಡೆಗಟ್ಟುವ ಕಾಯ್ದೆ‘ 1994ರಲ್ಲಿ ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT