ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭಾ ಸದಸ್ಯರಾಗಿ 15 ಮಂದಿ ಪ್ರಮಾಣ ವಚನ

Last Updated 14 ಸೆಪ್ಟೆಂಬರ್ 2020, 12:33 IST
ಅಕ್ಷರ ಗಾತ್ರ

ನವದೆಹಲಿ: ಜಾರ್ಖಂಡ್‌ನ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೇನ್‌, ಡಿಎಂಕೆ ನಾಯಕ ತಿರುಚ್ಚಿ ಶಿವ, ಬಿಜೆಪಿಯ ಸೈಯದ್‌ ಜಫರ್‌ ಇಸ್ಲಾಂ ಸೇರಿದಂತೆ ನೂತನವಾಗಿ ಆಯ್ಕೆಯಾದ 15 ಸದಸ್ಯರು ಸೋಮವಾರ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆಮುಂಗಾರು ಅಧಿವೇಶನ ಆರಂಭವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಸದಸ್ಯರೆಲ್ಲರನ್ನೂ ಸಭಾಪತಿ ಎಂ.ವೆಂಕಯ್ಯನಾಯ್ಡು ಅವರು, ದೂರದಿಂದಲೇ ಕೈಮುಗಿದು ಅಭಿನಂದಿಸಿದರು. ಇತರೆ ಸದಸ್ಯರೂ ನೂತನ ಸದಸ್ಯರ ಕೈಕುಲುಕದೆ, ನಮಸ್ಕರಿಸಿ ಅಭಿನಂದಿಸಿದರು.

ಡಿಎಂಕೆಯ ಎನ್‌.ಆರ್.ಎಲಾಂಗೊ, ಅಂತಿಯೂರ್‌ ಪಿ. ಸೆಲ್ವರಸು, ಬಿಜೆಪಿಯ ಜೈಪ್ರಕಾಶ್‌ ನಿಶಾದ್‌, ಕಾಂಗ್ರೆಸ್‌ ನಾಯಕ ಫುಲೊ ದೇವಿ ನೇತಂ, ಎನ್‌ಸಿಪಿಯ ಫೌಜಿಯಾ ಖಾನ್‌, ಟಿಆರ್‌ಎಸ್‌ನ ಕೆ.ಕೇಶವ ರಾವ್‌, ಕೆ.ಆರ್‌.ಸುರೇಶ್‌ ರೆಡ್ಡಿ, ಟಿಎಂಸಿ ನಾಯಕರಾದ ದಿನೇಶ್‌ ತ್ರಿವೇದಿ, ಅರ್ಪಿತಾ ಘೋಷ್‌, ಎಲ್‌ಜೆಡಿಯ ಎಂ.ವಿ.ಶ್ರೇಯಮ್ಸ್‌ ಕುಮಾರ್‌, ಎನ್‌ಪಿಪಿಯ ವನ್ಯುರಾಯ್‌ ಖಾರ್ಲುಖಿ, ಪಕ್ಷೇತರರಾಗಿ ಆಯ್ಕೆಯಾದ ಅಜಿತ್‌ ಕುಮಾರ್‌ ಭುಯಂ ಪ್ರಮಾಣ ವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT