ಭಾನುವಾರ, ಮೇ 29, 2022
23 °C

ಮಕ್ಬೂಲ್ ಭಟ್‌ ಗಲ್ಲಿಗೇರಿಸಿ 37 ವರ್ಷ: ಕಣಿವೆ ರಾಜ್ಯದಾದ್ಯಂತ ಬಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್‌ ನೇಣಿಗೇರಿದ 37ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಜೆಕೆಎಲ್‌ಎಫ್‌ ಸಂಘಟನೆಯು ಕಾಶ್ಮೀರದಲ್ಲಿ ಗುರುವಾರ ಬಂದ್‌ಗೆ ಕರೆ ನೀಡಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಶ್ರೀನಗರದಲ್ಲಿ ಹೆಚ್ಚಿನ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳು ಮುಚ್ಚಿವೆ. ಅಲ್ಲದೆ ಸಾರ್ವಜನಿಕ ಸಾರಿಗೆ ಬಸ್‌ಗಳು ಕೂಡ ರಸ್ತೆಗೆ ಇಳಿದಿಲ್ಲ’ ಎಂದು ಅವರು ಹೇಳಿದರು.

ಆದರೆ ನಗರದಲ್ಲಿ ಖಾಸಗಿ ಕಾರುಗಳು, ಆಟೋ ರಿಕ್ಷಾ ಮತ್ತು ಕ್ಯಾಬ್‌ಗಳು ಓಡಾಡುತ್ತಿವ ಎಂದು ಅವರು ಮಾಹಿತಿ ನೀಡಿದರು.

‘ಜಮ್ಮು ಮತ್ತು ಕಾಶ್ಮೀರದ ಇತರೆ ಜಿಲ್ಲೆಗಳಲ್ಲೂ ಬಂದ್‌ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು  ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

ಸಂಸತ್‌ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್‌ ಗುರುವನ್ನು ಫೆಬ್ರುವರಿ 23, 2013 ರಂದು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಜೆಕೆಎಲ್ಎಫ್ ಸ್ಥಾಪಕ ಮೊಹಮ್ಮದ್ ಮಕ್ಬೂಲ್ ಭಟ್‌ನನ್ನು ಫೆಬ್ರುವರಿ 11, 1984 ರಂದು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೆಕೆಎಲ್ಎಫ್ ಸಂಘಟನೆಯು ಇವರಿಬ್ಬರ ಸ್ಮರಣಾರ್ಥ ಫೆಬ್ರುವರಿ 9 ಮತ್ತು 11 ರಂದು ಜಮ್ಮು ಮತ್ತು ಕಾಶ್ಮೀರದಾದ್ಯಂತ ಬಂದ್‌ಗೆ ಕರೆ ನೀಡಿದೆ.

ಇದನ್ನೂ ಓದಿ... ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಕುತೂಹಲ ಮೂಡಿಸಿದ 10 ಅಡಿ ಎತ್ತರದ ಟೊಮೆಟೊ ಗಿಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು