ಮಂಗಳವಾರ, ಸೆಪ್ಟೆಂಬರ್ 28, 2021
20 °C

ಪರಂವೀರ್‌ ಸಿಂಗ್‌ ವಿರುದ್ಧ ಸುಲಿಗೆ ಆರೋಪ: ತನಿಖೆಗೆ ಎಸ್‌ಐಟಿ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಠಾಣೆ: ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಂವೀರ್‌ ಸಿಂಗ್‌ ಹಾಗೂ ಇತರ 27 ಜನರ ವಿರುದ್ಧದ ಸುಲಿಗೆ ಆರೋಪಗಳ ಕುರಿತು ತನಿಖೆ ನಡೆಸಲು ಠಾಣೆ ನಗರ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ ಯಾರನ್ನೂ ಬಂಧಿಸಿಲ್ಲಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಬಿಲ್ಡರ್‌ ಕೇತನ್ ತನ್ನಾ ಎಂಬುವವರು ನೀಡಿದ ದೂರಿನನ್ವಯ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಕಳೆದ ವಾರ ಪ್ರಕರಣ ದಾಖಲಾಗಿತ್ತು.

ಡಿಸಿಪಿ ದೀಪಕ್‌ ದೇವರಾಜ್‌, ಎಸಿಪಿ ಎನ್‌.ಟಿ.ಕದಂ, ಮಾಜಿ ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಾ, ಇನ್ಸ್‌ಪೆಕ್ಟರ್‌ ರಾಜಕುಮಾರ್‌ ಕೋಠ್‌ಮಿರೆ, ಗ್ಯಾಂಗ್‌ಸ್ಟರ್‌ ರವಿ ಪೂಜಾರಿ ಹಾಗೂ ನಗರ ಮೂಲದ ಪತ್ರಕರ್ತರೊಬ್ಬರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.