ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ವರ್ ಯಾತ್ರಿಕರ ಮೇಲೆ ಕೊಳಕು ನೀರು ಎರಚಿದ ಅನ್ಯ ಸಮುದಾಯದ 6 ಮಂದಿ ಬಂಧನ

Last Updated 30 ಜುಲೈ 2022, 4:52 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಬರೇಲಿಯ ಕಂಟೋನ್‌ಮೆಂಟ್ ಪ್ರದೇಶದಲ್ಲಿ ಕನ್ವರ್ ಯಾತ್ರಿಕರ ಮೇಲೆ ಕೊಳಕು ನೀರು ಎರಚುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಂಟೋನ್‌ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ವರ್ ಯಾತ್ರಿಕರು ಡಿ.ಜೆ. ಮ್ಯೂಸಿಕ್ ಅನ್ನು ಜೋರಾಗಿ ಇರಿಸಿದ್ದರಿಂದ ಸಮಸ್ಯೆ ಆರಂಭವಾಗಿದೆ. ಬಳಿಕ, ಮತ್ತೊಂದು ಸಮುದಾಯದ ಜನರು ಕಟ್ಟಡಗಳ ಮೇಲಿನಿಂದ ಕಲುಷಿತ ನೀರನ್ನು ಎರಚಿದ್ದಾರೆ ಎಂದು ಆರೋಪಿಸಿ ಕನ್ವರ್ ಯಾತ್ರಿಕರು ಪ್ರತಿಭಟನೆ ನಡೆಸಿದ್ದಾರೆ.

ಶುಕ್ರವಾರ ಕನ್ವರ್‌ ಯಾತ್ರಿಕರ ಗುಂಪೊಂದು ಪರ್ಗವಾ ಗ್ರಾಮದ ಮೂಲಕ ಹಾದು ಹೋಗುತ್ತಿದ್ದಾಗ ಡಿಜೆ ಮ್ಯೂಸಿಕ್ ವಿಚಾರದಲ್ಲಿ ಜಗಳ ಉಂಟಾಗಿದೆ. ಈ ಸಂದರ್ಭ ಅನ್ಯ ಕೋಮಿನ ಜನರು ಕನ್ವರ್ ಯಾತ್ರಿಕರ ಮೇಲೆ ಕೊಳಕು ನೀರನ್ನು ಎರಚಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ರವೀಂದ್ರ ಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಆಡಳಿತ) ವಿಕೆ ಸಿಂಗ್ ಅವರು ಕನ್ವರ್ ಯಾತ್ರಾರ್ಥಿಗಳಿಗೆ ಭದ್ರತೆ ಒದಗಿಸಲಾಗಿದೆ ಮತ್ತು ತಡೆಯಲು ಪ್ರಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಂದು ತಿಳಿಸಿದ್ಧಾರೆ.

ಕೋವಿಡ್–19 ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಕನ್ವರ್ ಯಾತ್ರೆ ಜುಲೈ 14ರಿಂದ ಆರಂಭವಾಗಿದೆ.

ಯಾತ್ರೆಯ ಭಾಗವಾಗಿ ಶಿವನ ಭಕ್ತರು ತಮ್ಮ ಪ್ರದೇಶಗಳ ಶಿವನ ದೇವಾಲಯದಲ್ಲಿ ಪೂಜೆಗಾಗಿ ಹರಿದ್ವಾರದ ಗಂಗಾನದಿಯ ಪವಿತ್ರ ಜಲವನ್ನು ಸಂಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT