ಸೋಮವಾರ, ಅಕ್ಟೋಬರ್ 18, 2021
23 °C

ಕೆಲ ಹೈಕೋರ್ಟ್‌ಗಳಿಗೆ ಶೀಘ್ರದಲ್ಲಿಯೇ ನ್ಯಾಯಮೂರ್ತಿಗಳ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸುಪ್ರೀಂ ಕೋರ್ಟ್‌ನ ಕೊಲಿಜಿಯಂನಿಂದ ಶಿಫಾರಸು ಮಾಡಲಾದ 68 ಜನರ ಪೈಕಿ ಕೆಲವರನ್ನು ಮುಂದಿನ ಕೆಲ ದಿನಗಳಲ್ಲಿ ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಕುರಿತ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಎಲ್ಲರ ನೇಮಕಾತಿಗಳು ಒಮ್ಮೆಗೆ ಆಗುವುದಿಲ್ಲ. ಬದಲಿಗೆ ಬ್ಯಾಚ್‌ಗಳ ಮೂಲಕ ನಡೆಯಲಿವೆ ಎಂದು ಮೂಲಗಳು ಹೇಳಿವೆ. ಆದರೆ, ಮೊದಲ ಬ್ಯಾಚ್‌ನಲ್ಲಿ ಎಷ್ಟು ನೇಮಕಾತಿಗಳು ನಡೆಯಲಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಈ ವರ್ಷದ ಆಗಸ್ಟ್ 8 ಮತ್ತು ಸೆಪ್ಟೆಂಬರ್ 1 ರ ನಡುವೆ, ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವಿವಿಧ ಹೈಕೋರ್ಟ್‌ಗಳಿಂದ ಶಿಫಾರಸು ಮಾಡಲಾದ 100ಕ್ಕೂ ಹೆಚ್ಚು ಹೆಸರುಗಳನ್ನು ಪರಿಶೀಲಿಸಿ, ಅಂತಿಮವಾಗಿ 12 ಹೈಕೋರ್ಟ್‌ಗಳಿಗೆ 68 ಹೆಸರನ್ನು ಸರ್ಕಾರಕ್ಕೆ ಕಳುಹಿಸಿತ್ತು.

ಈ ಪೈಕಿ ಕರ್ನಾಟಕದಿಂದ ಇಬ್ಬರು ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಒಬ್ಬರ ಹೆಸರನ್ನು ಮೂರನೇ ಬಾರಿಗೆ ಕಳುಹಿಸಲಾಗಿದೆ. ಅಲ್ಲದೆ ಇತರ 10 ಹೆಸರನ್ನು ಎರಡನೇ ಬಾರಿಗೆ ಶಿಫಾರಸು ಮಾಡಲಾಗಿದೆ. ಉಳಿದವರದ್ದು ಹೊಸ ಶಿಫಾರಸುಗಳಾಗಿವೆ.

ಕಾನೂನು ಸಚಿವಾಲಯದ ಮಾಹಿತಿ ಪ್ರಕಾರ, ದೇಶದ 25 ಹೈಕೋರ್ಟ್‌ಗಳಲ್ಲಿ ಒಟ್ಟು 1,098 ಮಂಜೂರಾದ ನ್ಯಾಯಮೂರ್ತಿ ಹುದ್ದೆಗಳಿವೆ. ಈ ಪೈಕಿ ಸೆಪ್ಟೆಂಬರ್ 1ರ ಹೊತ್ತಿಗೆ 465 ಹುದ್ದೆಗಳು ಖಾಲಿ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು