ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ವಿರುದ್ಧ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮ: ಯೋಗಿ ಆದಿತ್ಯನಾಥ್‌

Last Updated 9 ಆಗಸ್ಟ್ 2022, 1:32 IST
ಅಕ್ಷರ ಗಾತ್ರ

ಆಗ್ರಾ: ಸಂವಿಧಾನದ ವಿರುದ್ಧ ಕೆಲಸ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರದ ಘನತೆಗೆ ಧಕ್ಕೆ ತರಲು ಪ್ರಯತ್ನಿಸುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಬಿಜೆಪಿಯ ಯುವ ಘಟಕ, ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ದ ಮೂರು ದಿನಗಳ ತರಬೇತಿ ಶಿಬಿರದ ಅಂತಿಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್‌, ಭಾರತದ ಕಾನೂನನ್ನು ಗೌರವಿಸುವವರಿಗೆ ನಾವು ಗೌರವವನ್ನು ಕೊಡುತ್ತೇವೆ ಎಂದರು.

ಬಿಜೆಪಿ ಸ್ಥಾಪಕರ ಸಿದ್ಧಾಂತಗಳನ್ನು ರೂಢಿಗೊಳಿಸುವಂತೆ ಯುವ ಕಾರ್ಯಕರ್ತರಿಗೆ ಕರೆ ನೀಡಿದ ಯೋಗಿ ಆದಿತ್ಯನಾಥ್‌, ಆಯೋಧ್ಯೆಯಿಂದ ಬೃಜಭೂಮಿವರೆಗೆ ಹಾಗೂ ಖುಷಿನಗರದಿಂದ ಸಾರಾನಾಥದ ವರೆಗೆ, ಇಡೀ ಉತ್ತರ ಪ್ರದೇಶವು ಬಲಿದಾನದ ಭೂಮಿಯಾಗಿದೆ. ಉತ್ತರ ಪ್ರದೇಶದ ಯುವಕರು ಇತಿಹಾಸ ನಿರ್ಮಿಸುತ್ತಾರೆ ಮತ್ತು ಸೃಷ್ಟಿಸುತ್ತಾರೆ ಎಂದರು.

ದೇಶ ವಿಭಜನೆಯ ದುರಂತದ ಬಗ್ಗೆ ಹೊಸ ಪೀಳಿಗೆಗೆ ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಕರೆ ನೀಡಿದ ಯೋಗಿ ಆದಿತ್ಯನಾಥ್‌ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ಪ್ರತಿಪಕ್ಷಗಳಿಗೂ ಯುವ ಘಟಕಗಳಿವೆ. ಆದರೆ ಸಾರ್ವಜನಿಕವಾಗಿ ಎಂತಹ ವರ್ಚಸ್ಸು ಅವುಗಳಿಗಿದೆ? ಅವುಗಳಲ್ಲಿ ಇರುವುದು ಅರಾಜಕತೆ, ಬೆಂಕಿ ಹಚ್ಚುವುದು ಮತ್ತು ಲೂಟಿ ಮಾಡುವ ಸಂಸ್ಕೃತಿ. ಆದರೆ ಬಿಜೆಪಿಯ ಜೊತೆಗಿರುವ ಯುವ ಘಟಕಕ್ಕೆ ರಾಷ್ಟ್ರೀಯತೆ, ಧನಾತ್ಮಕ ಮನೋಭಾವ ಮತ್ತು ಅಭಿವೃದ್ಧಿಯ ಚಿಂತನೆಯಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT