ಭಾನುವಾರ, ಅಕ್ಟೋಬರ್ 25, 2020
24 °C

ಸುಶಾಂತ್‌ ಸಹೋದರಿಯ ಟ್ವಿಟರ್‌, ಇನ್‌ಸ್ಟಾಗ್ರಾಂ‌ ಖಾತೆ ನಿಷ್ಕ್ರಿಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಹೋದರಿ ಶ್ವೇತಾ ಸಿಂಗ್‌ ಅವರ ಇನ್‌ಸ್ಟಾಗ್ರಾಂ‌ ಮತ್ತು ಟ್ವಿಟರ್‌ ಖಾತೆಗಳು ನಿಷ್ಕ್ರಿಯಗೊಂಡಿವೆ.

ಸಾಮಾಜಿಕ ಮಾಧ್ಯಮಗಳನ್ನು ತ್ಯಜಿಸುವ ಕುರಿತು ಶ್ವೇತಾ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ, ಅವರಾಗಿಯೇ ಈ ಖಾತೆಗಳನ್ನು ನಿಷ್ಕಿಯಗೊಳಿಸಿದ್ದಾರೆಯೇ ಎಂಬ ಖಚಿತ ಮಾಹಿತಿ ದೊರಕಿಲ್ಲ. 

ಸುಶಾಂತ್‌ ಸಾವಿಗೀಡಾಗಿ ಬುಧವಾರಕ್ಕೆ ಸರಿಯಾಗಿ ನಾಲ್ಕು ತಿಂಗಳು ಕಳೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚುರುಕಾಗಿದ್ದ ಶ್ವೇತಾ ಅವರು, ಸಹೋದರನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಅಭಿಯಾನವನ್ನು ಆರಂಭಿಸಿದ್ದರು. ಇದ್ದಕ್ಕಿದ್ದಂತೆ ಅವರ ಖಾತೆಗಳು ನಿಷ್ಕಿಯಗೊಂಡಿರುವುದು ಸುಶಾಂತ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು