ಶನಿವಾರ, ಜುಲೈ 2, 2022
22 °C

ದೇಶದ ಉದ್ಯೋಗ ಕ್ಷೇತ್ರದ ಬೆನ್ನೆಲುಬು ಮುರಿದ ಪ್ರಧಾನಿ ಮೋದಿ: ರಾಹುಲ್ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೇಥಿ: ದೇಶದ ಉದ್ಯೋಗ ಕ್ಷೇತ್ರದ ಬೆನ್ನೆಲುಬನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸ್ನೇಹಿತರು ಮುರಿದಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮೇಥಿಯಲ್ಲಿ ಪ್ರಚಾರದಲ್ಲಿ ಭಾಗವಹಿಸಿರುವ ರಾಹುಲ್ ಗಾಂಧಿ, ಕೇಂದ್ರ ಹಾಗೂ ಉತ್ತರ ಪ್ರದೇಶದ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: 

ನೀವು ಎಷ್ಟೇ ಅಧ್ಯಯನ ಮಾಡಿ, ಮುಂದಿನ ದಿನಗಳಲ್ಲಿ ದೇಶದ ಯುವ ಜನತೆಗೆ ಉದ್ಯೋಗ ಸಿಗಲು ಸಾಧ್ಯವಿಲ್ಲ ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದರು.

 

 

 

ಕೋವಿಡ್ ಸಮಯದಲ್ಲಿ ನನ್ನ ಮಾತನ್ನು ಯಾರೂ ಆಲಿಸಿಲ್ಲ. ಆದರೆ ಗಂಗಾ ನದಿಯಲ್ಲಿ ಮೃತದೇಹ ತೇಲಿರುವುದನ್ನು ನೀವೇ ಕಣ್ಣಾರೆ ಕಂಡಿದ್ದೀರಿ ಎಂದು ಹೇಳಿದರು.

 

ಕಳೆದ 70 ವರ್ಷಗಳಲ್ಲಿ ಏನೂ ಆಗಿಲ್ಲ ಎಂದು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ರಾಹುಲ್, ವಾಸ್ತವವಾಗಿ 70 ವರ್ಷಗಳಲ್ಲಿ ಅಂಬಾನಿ, ಅದಾನಿ ಪರ ಏನೂ ಆಗಿಲ್ಲ ಎಂದು ಲೇವಡಿ ಮಾಡಿದರು.

ಭಾರತಕ್ಕೆ ದೊಡ್ಡ ಕೋಟ್ಯಾಧಿಪತಿಗಳು ಉದ್ಯೋಗವನ್ನು ನೀಡುವುದಿಲ್ಲ ಎಂಬುದನ್ನು ನೆನಪಿಡಿ. ಸಣ್ಣ ವ್ಯಾಪಾರಿಗಳಿಂದ ಇದು ಸಾಧ್ಯ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು