ಗುರುವಾರ , ಜನವರಿ 27, 2022
20 °C

ತಿರುಮಲ: ಮೂರನೇ ಘಾಟ್ ರಸ್ತೆ, ಮೆಟ್ಟಿಲು ಮಾರ್ಗ ನಿರ್ಮಾಣ ಶೀಘ್ರ- ಟಿಟಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುಪತಿ: ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಸಂಪರ್ಕಿಸಲು ಘಾಟ್‌ ಮೂಲಕ ಮೂರನೇ ರಸ್ತೆ ಹಾಗೂ ಮೂರನೇ ಮೆಟ್ಟಿಲು ಮಾರ್ಗವನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.

‘ನೂತನ ರಸ್ತೆ ಹಾಗೂ ಮೆಟ್ಟಿಲುಗಳ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಡಿಪಿಆರ್‌ ಸಿದ್ಧಪಡಿಸುವಂತೆ ಎಂಜಿನಿಯರಿಂಗ್‌ ವಿಭಾಗಕ್ಕೆ ಟಿಟಿಡಿ ಚೇರಮನ್ ವೈ.ವಿ.ಸುಬ್ಬಾರೆಡ್ಡಿ ಸೂಚಿಸಿದ್ದಾರೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.

‘ಉದ್ದೇಶಿತ ಮೆಟ್ಟಿಲುಗಳ ಮಾರ್ಗವನ್ನು ‘ಅನ್ನಮಂಯ್ಯ ಮಾರ್ಗ’ ಎಂದು ಕರೆಯಲಾಗುವುದು. ಕಡಪ ಜಿಲ್ಲೆ ಮತ್ತು ಹೈದರಾಬಾದ್‌ನಿಂದ ಬರುವವರಿಗೆ ಈ ಮಾರ್ಗದಿಂದ ಹೆಚ್ಚು ಅನುಕೂಲವಾಗುವುದು’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು