ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರದ ಎನ್‌ಕೌಂಟರ್‌: ಗಾಯಗೊಂಡಿದ್ದ ಎಲ್‌ಇಟಿ ಕಮಾಂಡರ್ ಸಾವು

Last Updated 29 ಜೂನ್ 2021, 7:09 IST
ಅಕ್ಷರ ಗಾತ್ರ

ಶ್ರೀನಗರ: ಬಂಧನವಾದ ಒಂದು ದಿನದ ಬಳಿಕ, ಲಷ್ಕರ್ ಇ ತಯ್ಯಬಾ (ಎಲ್‌ಇಟಿ) ಕಮಾಂಡರ್ ನದೀಮ್ ಅಬ್ರಾರ್ ನಗರದ ಪರಿಂಪೋರಾ ಪ್ರದೇಶದಲ್ಲಿ ನಡೆದ ಸರ್ಚ್ ಆಪರೇಶನ್ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಹಲವು ಹತ್ಯೆಗಳಲ್ಲಿ ಭಾಗಿಯಾಗಿರುವ ಎಲ್‌ಇಟಿಯ ಉನ್ನತ ಕಮಾಂಡರ್ ಅಬ್ರಾರ್‌ನನ್ನು ಸೋಮವಾರ ಪರಿಂಪೋರಾದಲ್ಲಿ ವಾಹನಗಳನ್ನು ಪರಿಶೀಲಿಸುವಾಗ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.ವಿಚಾರಣೆ ವೇಳೆಎಲ್‌ಇಟಿ ಕಮಾಂಡರ್ ತನ್ನ ಎಕೆ -47 ರೈಫಲ್ ಅನ್ನು ಮಾಲೂರಾ ಪ್ರದೇಶದಲ್ಲಿ ಅಡಗಿಸಿಟ್ಟಿರುವುದಾಗಿ ಬಹಿರಂಗಪಡಿಸಿದ್ದಾನೆ.

ಹೆದ್ದಾರಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಬಗ್ಗೆ ನಿರ್ದಿಷ್ಟ ಮಾಹಿತಿ ಇತ್ತು. ಖಚಿತ ಮಾಹಿತಿ ಆಧರಿಸಿ ಜಮ್ಮು–ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಹೆದ್ದಾರಿಯಲ್ಲಿ ಜಂಟಿ ಚೆಕ್ ಪೋಸ್ಟ್ ನಿರ್ಮಿಸಿ ಪರಿಶೀಲನೆ ಆರಂಭಿಸಿದ್ದವು.

‘ಪರಿಂಪೋರಾ ನಾಕಾದಲ್ಲಿ (ಚೆಕ್‌ಪೋಸ್ಟ್) ವಾಹನವನ್ನು ತಡೆಯಲಾಯಿತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ತನ್ನ ಬ್ಯಾಗ್ ತೆರೆಯುವಂತೆ ನಟಿಸಿ ಗ್ರೆನೇಡ್ ದಾಳಿಗೆ ಯತ್ಗಿಸಿದ್ದಾನೆ. ಕೂಡಲೆ, ಪೊಲೀಸರು, ಹಿಂಬದಿ ಕುಳಿತಿದ್ದ ವ್ಯಕ್ತಿಯನ್ನು ಹಿಡಿದು ಹೊರಗೆ ಎಳೆದಿದ್ದಾರೆ. ಚಾಲಕ ಮತ್ತು ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅವನ ಮಾಸ್ಕ್ ಅನ್ನು ತೆಗೆದ ನಂತರ, ಆತ ಎಲ್‌ಇಟಿ ಟಾಪ್ ಕಮಾಂಡರ್ ಅಬ್ರಾರ್ ಎಂದು ಗುರುತಿಸಲಾಗಿದೆ ’ಎಂದು ವಕ್ತಾರರು ತಿಳಿಸಿದ್ದಾರೆ.

ಅಬ್ರಾರ್ ಅವರ ಬಳಿಯಿಂದ ಪಿಸ್ತೂಲ್ ಮತ್ತು ಕೆಲವು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.

ಅಲ್ಲಿಂದ, ಅಬ್ರಾರ್‌ನನ್ನು ಶಸ್ತ್ರಾಸ್ತ್ರವನ್ನು (ಎಕೆ 47 ರೈಫಲ್) ಅಡಗಿಸಿಟ್ಟಿದ್ದ ಮನೆಗೆ ಕರೆದೊಯ್ಯಲಾಯಿತು, ಮನೆ ಸುತ್ತುವರಿದು ಕಾರ್ಯಾಚರಣೆಗೆ ಮುಂದಾದಾಗ, ಮನೆಯಲ್ಲಿಅಡಗಿದ್ದಕುಳಿತಿದ್ದ ಪಾಕಿಸ್ತಾನದ ಭಯೋತ್ಪಾದಕನು ಗುಂಡಿನ ದಾಳಿ ನಡೆಸಿದ್ದಾನೆ.

ಆರಂಭಿಕ ಸುತ್ತಿನ ಗುಂಡಿನ ಚಕಮಕಿಯಲ್ಲಿ 3 ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಸರ್ಚ್ ಮಾಡುತ್ತಿದ್ದ ವ್ಯಕ್ತಿ ಜೊತೆಗೆ ಅಬ್ರಾರ್ ಸಹ ಗಾಯಗೊಂಡಿದ್ದನುಎಂದು ವಕ್ತಾರರು ತಿಳಿಸಿದ್ದಾರೆ.

‘ಬಳಿಕ ಭದ್ರತಾಪಡೆಯು ಪ್ರತಿ ದಾಳಿ ನಡೆಸಿತು. ಈ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಪ್ರಜೆಯನ್ನು ಹೊಡೆದುರುಳಿಸಿದ್ದಾರೆ. ಈ ಸಂದರ್ಭ ಗಾಯಗೊಂಡಿದ್ದ ಎಲ್‌ಇಟಿ ಕಮಾಂಡರ್ ಅಬ್ರಾರ್ ಸಹ ಸಾವನ್ನಪ್ಪಿದ್ದಾನೆ. ಆತನಿಂದ ಎರಡು ಎಕೆ -47 ರೈಫಲ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸೇನಾ ಪಡೆ ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT