ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಭತ್ತ ಖರೀದಿ ನೀತಿ ವಿರುದ್ಧ ದೆಹಲಿಯಲ್ಲಿ ಟಿಎಸ್‌ಆರ್‌ ಪ್ರತಿಭಟನೆ

Last Updated 11 ಏಪ್ರಿಲ್ 2022, 11:06 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರದ ಭತ್ತ ಖರೀದಿ ನೀತಿವಿರುದ್ಧತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದಲ್ಲಿ ಟಿಆರ್‌ಎಸ್‌ ಪಕ್ಷದ ಮುಖಂಡರು ದೆಹಲಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ತೆಲಂಗಾಣ ಭವನದಲ್ಲಿ ಟಿಆರ್‌ಎಸ್ ಪಕ್ಷದ ಮುಖಂಡರೊಂದಿಗೆ ಧರಣಿ ನಡೆಸಿದ ರಾವ್ ಅವರು, ಕೇಂದ್ರ ಸರ್ಕಾರವು ಈ ಸಮಸ್ಯೆಯನ್ನು 24 ಗಂಟೆಗಳೊಳಗೆ ಪರಿಹರಿಸಬೇಕು ಎಂದು ಗಡುವ ವಿಧಿಸಿದರು. ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ದೇಶದಾದ್ಯಂತ ಪ್ರತಿಭಟನೆ ನಡಸುವುದಾಗಿಯೂ ಅವರು ಎಚ್ಚರಿಸಿದರು.

‘ನಮ್ಮ ರೈತರ ಭಾವನೆಗಳೊಂದಿಗೆ ಆಟವಾಡಬೇಡಿ, ಸರ್ಕಾರವನ್ನು ಬೀಳಿಸುವ ಶಕ್ತಿ ಅವರಿಗಿದೆ’, ಎಂದ ಅವರು, ‘ರೈತರು ಭಿಕ್ಷುಕರಲ್ಲ, ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಡೆಯುವ ಹಕ್ಕು ಅವರಿಗಿದೆ’ ಎಂದರು.

ಭಾರತೀಯ ಕಿಸಾನ್ ಯುನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.

ತೆಲಂಗಾಣದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ದೆಹಲಿಯಲ್ಲಿ ನಡೆಸಿದ ಮೊದಲ ಪ್ರತಿಭಟನಾ ರ್‍ಯಾಲಿ ಇದಾಗಿದ್ದು, ಪಕ್ಷದ ಸಂಸದರು, ಶಾಸಕರು ಮತ್ತು ತೆಲಂಗಾಣದ ಸಂಪುಟ ಸಚಿವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT