ಜೈಪುರ: ಕಾಕತಾಳೀಯವೆಂಬಂತೆ ಒಬ್ಬರ ಹಿಂದೊಬ್ಬರು ಮೃತಪಟ್ಟ ಅವಳಿ ಸಹೋದರರನ್ನು ಒಂದೇ ಚಿತೆಯಲ್ಲಿ ಮಲಗಿಸಿ ಅಂತ್ಯಸಂಸ್ಕಾರ ನೆರವೇರಿಸಿರುವ ಘಟನೆ ರಾಜಸ್ಥಾನದ ಬರ್ಮರ್ ಜಿಲ್ಲೆಯಲ್ಲಿ ನಡೆದಿದೆ.
ಸರ್ನೋನ್ ಕಾ ತಲಾ ಹಳ್ಳಿಯಲ್ಲಿ ಗುರುವಾರ ಒಂದೇ ಬಾರಿಗೆ 26 ವರ್ಷದ ಸುಮೆರ್ ಮತ್ತು ಸೋಹಾನ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಸೂರತ್‌ನಲ್ಲಿ ಕೆಲಸದಲ್ಲಿದ್ದ ಸುಮೇರ್ ಸಿಂಗ್, ಮಂಗಳವಾರ ಮಹಡಿಯಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಬುಧವಾರ, ಸುಮೇರ್ ಮೃತದೇಹವನ್ನು ಹುಟ್ಟೂರಿಗೆ ತರಲಾಗಿದೆ.
ಜೈಪುರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿದ್ದ ಸೋಹಾನ್ ಸಿಂಗ್‌ನನ್ನು ತಂದೆಯ ಅನಾರೋಗ್ಯದ ನೆಪ ಹೇಳಿ ಊರಿಗೆ ಕರೆಸಲಾಗಿದೆ.
ಗುರುವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ಕೊಳದಲ್ಲಿ ನೀರು ತರಲು ಹೋಗಿದ್ದಾಗ ಕೊಳದಲ್ಲೇ ಬಿದ್ದು ಆತನೂ ಮೃತಪಟ್ಟಿದ್ದಾನೆ. ನೀರು ತರಲು ಹೋದವ ಎಷ್ಟು ಹೊತ್ತಾದರೂ ವಾಪಸ್ ಬರದಿದ್ದಾಗ ಕುಟುಂಬ ಸದಸ್ಯರು ಬಂದು ಹುಡುಕಾಡಿದ್ದಾರೆ. ಈ ಸಂದರ್ಭ ಕೊಳದಲ್ಲಿ ಮೃತದೇಹ ಪತ್ತೆಯಾಗಿದೆ.
ಸಹೋದರರು ಉತ್ತಮ ಬಾಂಧವ್ಯ ಹೊಂದಿದ್ದರು. ಜೊತೆಯಲ್ಲೇ ಶಿಕ್ಷಣ ಮುಗಿಸಿದ್ದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗಾಗಿ, ಸುಮೇರ್ ಸಾವಿನಿಂದ ನೊಂದ ಸೊಹಾನ್ ಸಹ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.