ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯ ‘ಬ್ಲೂ ಟಿಕ್‘ ಮರುಸ್ಥಾಪಿಸಿದ ಟ್ವಿಟರ್

ಅಕ್ಷರ ಗಾತ್ರ

ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ವೆರಿಫೈಯ್ಡ್ ಬ್ಲೂ ಬ್ಯಾಡ್ಜ್ ಅನ್ನು ತೆಗೆದುಹಾಕಿದ್ದ ಟ್ವಿಟರ್ ಸಂಸ್ಥೆ ಕೆಲವೇ ಗಂಟೆಗಳಲ್ಲಿ ಮರುಸ್ಥಾಪಿಸಿದೆ.

ಇಂದು ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಲೂ ಟಿಕ್ ತೆಗೆಯಲಾಗಿತ್ತು. ಬಳಿಕ, ಕೆಲವೇ ಗಂಟೆಗಳಲ್ಲಿ ಮತ್ತೆ ಬ್ಲೂ ಟಿಕ್ ನೀಡಲಾಗಿದೆ.

ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯು ಜುಲೈ 2020ರಿಂದ ನಿಷ್ಕ್ರಿಯವಾಗಿದೆ. ನಮ್ಮ ಪರಿಶೀಲನಾ ನೀತಿಯ ಪ್ರಕಾರ, ಖಾತೆ ನಿಷ್ಕ್ರಿಯವಾಗಿದ್ದರೆ ಟ್ವಿಟರ್ ಬ್ಲೂ ವೆರಿಫೈಡ್ ಬ್ಯಾಡ್ಜ್ ಮತ್ತು ಪರಿಶೀಲಿಸಿದ ಸ್ಥಿತಿಯನ್ನು ತೆಗೆದುಹಾಕಬಹುದು. ಈಗ ಬ್ಯಾಡ್ಜ್ ಮರುಸ್ಥಾಪಿಸಲಾಗಿದೆ ಎಂದು ಟ್ವಿಟರ್ ತಿಳಿಸಿರುವುದಾಗಿ ಎಎನ್‌ಐಟ್ವೀಟ್ ಮಾಡಿದೆ.

ನಾಯ್ಡು ಅವರ ವೈಯಕ್ತಿಕ ಖಾತೆ, 13 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದು, ಕೊನೆಯ ಟ್ವೀಟ್ ಕಳೆದ ವರ್ಷ ಜುಲೈ 23 ರಂದು ಮಾಡಲಾಗಿದೆ.

ಇವುಗಳನ್ನೂಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT