ಮಂಗಳವಾರ, ಏಪ್ರಿಲ್ 20, 2021
29 °C

ಮಧ್ಯಪ್ರದೇಶ: ವಾಹನ ಬಾವಿಗೆ ಬಿದ್ದು ಇಬ್ಬರು ಪೊಲೀಸರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಯೋನಿ (ಮಧ್ಯಪ್ರದೇಶ): ವಾಹನವು ವಿದ್ಯುತ್ ಪರಿವರ್ತಕಕ್ಕೆ ಡಿಕ್ಕಿ ಹೊಡೆದು ಬಾವಿಗೆ ಬಿದ್ದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟ ಘಟನೆ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.

‘ಪೌಡಿ ಗ್ರಾಮದ ಕಲಾರ್‌ಬಂಕಿ–ಬಂಡೋಲ್‌ ರಸ್ತೆ ಬಳಿ ಶುಕ್ರವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ’ ಎಂದು ಬಂಡೋಲ್ ಪೊಲೀಸ್‌ ಠಾಣೆಯ ಅಧಿಕಾರಿ ಹೇಳಿದರು.

‘ಇನ್‌ಸ್ಪೆಕರ್‌ ನಿಲೇಶ್‌ ಪಾರ್ತೇತಿ(40) ಮತ್ತು ಕಾನ್‌ಸ್ಟೇಬಲ್‌ ಚಂದ್ರಕುಮಾರ್‌ ಚೌಧರಿ(30) ಅವರು ಛಪಾರ ಪೊಲೀಸ್‌ ಠಾಣೆಯತ್ತ ಎಸ್‌ಯುವಿಯಲ್ಲಿ ಪಯಣಿಸುತ್ತಿದ್ದರು. ಈ ವೇಳೆ ವಾಹನ ವಿದ್ಯುತ್‌ ಪರಿವರ್ತಕಕ್ಕೆ ಡಿಕ್ಕಿ ಹೊಡೆದು, ಬಾವಿಗೆ ಬಿದ್ದಿದೆ’ ಎಂದು ಅವರು ತಿಳಿಸಿದರು.

‘ಶನಿವಾರ, ಬಾವಿಯಲ್ಲಿ ವಾಹನವನ್ನು ಗಮನಿಸಿದ ಗ್ರಾಮಸ್ಥರು  ಪೊಲೀಸರಿಗೆ ತಿಳಿಸಿದರು. ಬಳಿಕ ಬಾವಿಯಿಂದ ಮೃತದೇಹಗಳನ್ನು ಹೊರತೆಗೆಯಲಾಯಿತು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು