ಶುಕ್ರವಾರ, ಏಪ್ರಿಲ್ 23, 2021
27 °C

ಉತ್ತರಾಖಂಡ ನೀರ್ಗಲ್ಲು ಕುಸಿತ: ತಪೋವನದಲ್ಲಿ ಮತ್ತೆರಡು ಶವಗಳು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತ ಅವಘಡ ಸಂಬಂಧಿಸಿದಂತೆ ರಕ್ಷಣಾ  ಕಾರ್ಯ 15 ನೇ ದಿನವೂ ಮುಂದುವರಿದಿದ್ದು, ಶನಿವಾರ ತಪೋವನ–ವಿಷ್ಣುಗಡ್ ಯೋಜನೆಯ ಸ್ಥಳದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ.

‘ಶನಿವಾರ ಸಂಜೆ ಮೂರು ಶವಗಳು ಪತ್ತೆಯಾಗಿತ್ತು. ರಾತ್ರಿ ವೇಳೆಗೆ ಇನ್ನೂ ಎರಡು ಶವಗಳು ಸಿಕ್ಕಿವೆ. ಈ ಮೂಲಕ ಮೃತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. 137 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಫೆಬ್ರುವರಿ 7 ರಂದು ಚಮೋಲಿ ಜಿಲ್ಲೆಯ ರಿಷಿ ಗಂಗಾದ ಬಳಿ ನೀರ್ಗಲ್ಲು ಕುಸಿತ ಸಂಭವಿಸಿದೆ. ಇದರಿಂದಾಗಿ ಸಂಭವಿಸಿದ ಪ್ರವಾಹದಲ್ಲಿ 13.2 ಮೆಗಾವಾಟ್ ಸಾಮರ್ಥ್ಯದ ರಿಷಿ ಗಂಗಾ ಜಲವಿದ್ಯುತ್ ಯೋಜನೆಯು ಸಂಪೂರ್ಣ ನಾಶಗೊಂಡಿದೆ. ತಪೋವನ–ವಿಷ್ಣುಗಡ್ ಯೋಜನೆಗೂ ಭಾರಿ ಹಾನಿಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು