ಮಂಗಳವಾರ, ಆಗಸ್ಟ್ 16, 2022
30 °C

‘ಇನ್ವೆಸ್ಟ್ ಇಂಡಿಯಾ’ ಅಭಿನಂದಿಸಿದ ಪ್ರಧಾನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2020ನೇ ಸಾಲಿನ ‘ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿ’ಯನ್ನು ತನ್ನದಾಗಿಸಿಕೊಂಡ ಕೇಂದ್ರ ಸರ್ಕಾರದ ಹೂಡಿಕೆ ಉತ್ತೇಜನ ಮತ್ತು ನೆರವು ಸಂಸ್ಥೆ ‘ಇನ್ವೆಸ್ಟ್ ಇಂಡಿಯಾ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಭಿನಂದನೆ ಸಲ್ಲಿಸಿದ್ದಾರೆ. 

‘ಹೂಡಿಕೆಗೆ ಸಂಬಂಧಿಸಿದಂತೆ ಭಾರತವನ್ನು ವಿಶ್ವದ ಆದ್ಯತೆಯ ತಾಣವನ್ನಾಗಿ ಮಾಡಲು ಮತ್ತು ವ್ಯಾಪಾರವನ್ನು ಮತ್ತಷ್ಟೂ ಸುಲಭಗೊಳಿಸುವುದು ನಮ್ಮ ಸರ್ಕಾರದ ಗುರಿ ಎಂಬುದಕ್ಕೆ ಈ ಪ್ರಶಸ್ತಿ ಸಾಕ್ಷಿಯಾಗಿದೆ’ ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ಸಮ್ಮೇಳನ (ಯುಎನ್‌ಸಿಟಿಎಡಿ) ‘ಇನ್ವೆಸ್ಟ್ ಇಂಡಿಯಾ’ವನ್ನು ವಿಶ್ವಸಂಸ್ಥೆಯ ಹೂಡಿಕೆ ಉತ್ತೇಜನ ಪ್ರಶಸ್ತಿ 2020 ರ ವಿಜೇತ ಎಂದು ಘೋಷಿಸಿದ್ದು, ಜೆನೆವಾದಲ್ಲಿರುವ ಯುಎನ್‌ಸಿಟಿಎಡಿ ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಸೋಮವಾರ ನಡೆಯಿತು.

ಹೂಡಿಕೆ ಉತ್ತೇಜನ ಸಂಸ್ಥೆಗಳ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು